Home Uncategorized ಕಾಂತಾರ ಚಿತ್ರಕ್ಕೆ ಕಾನೂನು ಸಂಕಟ: ವರಾಹರೂಪಂ ಹಾಡಿಗೆ ತಡೆ ನೀಡಿದ ಕೇರಳ ನ್ಯಾಯಾಲಯ

ಕಾಂತಾರ ಚಿತ್ರಕ್ಕೆ ಕಾನೂನು ಸಂಕಟ: ವರಾಹರೂಪಂ ಹಾಡಿಗೆ ತಡೆ ನೀಡಿದ ಕೇರಳ ನ್ಯಾಯಾಲಯ

ತಿರುವನಂತಪುರಂ: ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡು ರಾಜ್ಯಾದ್ಯಂತ ಸುದ್ದಿ ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಸಿನೆಮಾಕ್ಕೆ ಇದೀಗ ಕಾನೂನು ಸಂಕಟ ಎದುರಾಗಿದ್ದು, ಚಿತ್ರದ ವರಾಹರೂಪಂ ಹಾಡಿಗೆ ಕೇರಳ ನ್ಯಾಯಾಲಯ ತಡೆ ನೀಡಿದೆ.

ನಿರ್ದೇಶಕರು ವರಾಹರೂಪಂ ಹಾಡನ್ನು ಕೃತಿಚೌರ್ಯ ಮಾಡಿದ್ದಾರೆ. ಇದು ಕೃತಿಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಮ್ ಬ್ರಿಡ್ಜ್ ಸಂಸ್ಥೆಯು ನಿರ್ಮಾಪಕರ ವಿರುದ್ಧ ದೂರು ನೀಡಿದ್ದು, ಚಿತ್ರವನ್ನು ವಿವಾದದಲ್ಲಿ ಸಿಲುಕಿಸಿದೆ.

ಫೇಸ್ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರೋ ಥೈಕುಡಂ ಬ್ರಿಡ್ಜ್ ಸಂಸ್ಥೆ, ಕಾಂತಾರದ ಜನಪ್ರಿಯ ಹಾಡು, ‘ವರಾಹ ರೂಪಂ’ ಮತ್ತು ಅದರ ಟ್ರ್ಯಾಕ್ 2017 ರ ‘ನವರಸಮ್’ ನಡುವಿನ ಸಾಮ್ಯತೆಗಳ ಬಗ್ಗೆ ಸುಳಿವು ನೀಡಿದ್ದು . ಕಾಂತಾರ ಮತ್ತು ಅದರ ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ತಂಡದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದೆ.

ತೈಕುಡಂ ಬ್ರಿಡ್ಜ್ ಸಂಸ್ಥೆ ನೀಡಿದ ದೂರಿನ ಹಿನ್ನೆಲೆಯಲ್ಲಿ ವರಹರೂಪಂ ಹಾಡಿಗೆ ನಿರ್ಬಂಧ ಹೇರಲಾಗಿದ್ದು, ಹಾಡು ಪ್ರಸಾರ ಮಾಡದಂತೆ ಕೇರಳದ ಕೋರ್ಟ್ ಆದೇಶ ಹೊರಡಿಸಿದೆ.

Join Whatsapp
Exit mobile version