Home ಟಾಪ್ ಸುದ್ದಿಗಳು ಮಹಿಳೆಯ ಕೆನ್ನೆಗೆ ಬಾರಿಸಿದ ಸೋಮಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ: WIM ಉಪಾಧ್ಯಕ್ಷೆ ಡಾಕ್ಟರ್ ಬಿ...

ಮಹಿಳೆಯ ಕೆನ್ನೆಗೆ ಬಾರಿಸಿದ ಸೋಮಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ: WIM ಉಪಾಧ್ಯಕ್ಷೆ ಡಾಕ್ಟರ್ ಬಿ .ಕೆ. ಪ್ರಮೀಳಾದೇವಿ

ಬೆಂಗಳೂರು:  ಮನೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ತನಗೆ ಮನೆ ಮಂಜೂರಾಗಿಲ್ಲ ಎಂಬ ಅಳಲನ್ನು ತೋಡಿಕೊಂಡು ಬಂದ ಮಹಿಳೆಗೆ ಸಚಿವ ಸೋಮಣ್ಣ ಕೆನ್ನೆಗೆ ಬಾರಿಸುವ ಮೂಲಕ ಹೀಯಾಳಿಸಿರುವುದು  ಖಂಡನಾರ್ಹ ಎಂದು ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯ ಉಪಾಧ್ಯಕ್ಷರಾದ ಡಾ. ಬಿ. ಕೆ. ಪ್ರಮೀಳಾದೇವಿ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರಮೀಳಾದೇವಿ, ಸಂತ್ರಸ್ತ ಮಹಿಳೆಯರ ಮೇಲೆ ಹಲ್ಲೆ ನಡೆದಿರುವುದು ಇದು ಮೊದಲ ಬಾರಿಯಲ್ಲ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ  ಸುರಿದ ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತೆಯು ಅರವಿಂದ ಲಿಂಬಾವಳಿಯೊಂದಿಗೆ ಅಹವಾಲು ತೋಡಿಕೊಂಡಾಗ ಇದೇ ರೀತಿ  ಮಹಿಳೆಯೊಂದಿಗೆ ದುರ್ವರ್ತನೆ ತೋರಿದ್ದಾರೆ.. ಆದ್ದರಿಂದ ಸಂತ್ರಸ್ತ ಮಹಿಳೆಯರ ಮೇಲೆ ಹಲ್ಲೆಗಳನ್ನು ನಡೆಸುತ್ತಾ ಬರೋದು ಬಿಜೆಪಿಗರ ಚಾಳಿಯಾಗಿ ಮಾರ್ಪಟ್ಟಿದೆ.ಭೇಟಿ ಬಚಾವೋ ಎಂಬ ಪೊಳ್ಳು ಘೋಷಣೆಯನ್ನು ಕೂಗಿಕೊಂಡು ಮಹಿಳೆಯರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುವುದು ಬಿಜೆಪಿಯ ಸಂಸ್ಕೃತಿಯೇ? ಎಂದು ಅವರು  ಪ್ರಶ್ನಿಸಿದ್ದಾರೆ.

ದಲಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲಿ ಹಾಗೂ ಬಹಿರಂಗವಾಗಿ ಆ ದಲಿತ ಮಹಿಳೆಯೊಂದಿಗೆ ಕ್ಷಮೆಯಾಚಿಸಲಿ ಎಂದು ಅವರು ಒತ್ತಾಯಿಸಿದ್ದಾರೆ

Join Whatsapp
Exit mobile version