Home Uncategorized ಸೋಮವಾರದೊಳಗೆ ರಾಜೀನಾಮೆ ನೀಡಿ: 9 ವಿವಿ ಕುಲಪತಿಗಳಿಗೆ ತಾಕೀತು ಮಾಡಿದ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್...

ಸೋಮವಾರದೊಳಗೆ ರಾಜೀನಾಮೆ ನೀಡಿ: 9 ವಿವಿ ಕುಲಪತಿಗಳಿಗೆ ತಾಕೀತು ಮಾಡಿದ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್

ಕೇರಳ: ಕೇರಳ ಸರಕಾರ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಈ ನಡುವೆ ರಾಜ್ಯಪಾಲರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಎಂದು ಕೇರಳದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಆದೇಶಿಸಿದ್ದಾರೆ.

ಇತ್ತೀಚೆಗೆ ವಿಶ್ವವಿದ್ಯಾನಿಲಯದ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ಪಾಲಿಸದೆ ನೇಮಕಗೊಳಿಸಿರುವ ಕಾರಣ ತಿರುವನಂತಪುರದ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯ ನೇಮಕಾತಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದೇ ತೀರ್ಪನ್ನೇ ಬಳಸಿಕೊಂಡು ಆದೇಶ ನೀಡಿರುವ ರಾಜ್ಯಪಾಲರು, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಒಂಬತ್ತು ವಿವಿಗಳ ಕುಲಪತಿಗಳಿಗೆ ಸೋಮವಾರ ಬೆಳಗ್ಗೆ 11.30ರೊಳಗೆ ರಾಜೀನಾಮೆ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಕೇರಳ ರಾಜಭವನದ ಅಧಿಕೃತ ಟ್ವಟರ್ ಖಾತೆಯ ಮೂಲಕ ತಿಳಿಸಿದೆ.

ಆಡಳಿತಾರೂಢ ಎಲ್ಡಿಎಫ್ ನವೆಂಬರ್ ನಲ್ಲಿ ರಾಜ್ಯಪಾಲರ ವಿರುದ್ಧ ಸರಣಿ ಪ್ರತಿಭಟನೆಗಳನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಬಂದಿದ್ದು. ಈ ಪತ್ರವನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ ಗಳಿಗೆ ಇಮೇಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೇರಳ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ತುಂಚತ್ ಎಜುತಾಚನ್ ಮಲಯಾಳಂ ವಿಶ್ವವಿದ್ಯಾಲಯ ಈ ಒಂಬತ್ತು ವಿಶ್ವವಿದ್ಯಾಲಯಗಳಾಗಿವೆ.

Join Whatsapp
Exit mobile version