ಬೆಂಗಳೂರು: ಕೆಲವು ದಿನಗಳ ಹಿಂದೆ ಯುವತಿಯೊಬ್ಬಳು ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಘಟನೆ ಮಾಸುವ ಮುನ್ನವೇ ಅಸ್ಸಾಂನಿಂದ ನಗರಕ್ಕೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಯುವಕನೋರ್ವ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದಾನೆ.
ಅಸ್ಸಾಂ ನಿಂದ ಬಂದ 6ಇ 716 ಇಂಡಿಗೂ ವಿಮಾನದಲ್ಲಿ ಮಧ್ಯರಾತ್ರಿ 1:30 ರ ವೇಳೆ ಪ್ರಯಾಣಿಕ ಶೇಹರಿ ಚೌದರಿ ಧೂಮಪಾನ ಮಾಡಿದ್ದಾನೆ. ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆ ವಿಮಾನದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.
ವಿಮಾನವು ಬೆಂಗಳೂರಿನಲ್ಲಿ ಇಳಿದ ಕೂಡಲೇ ಏರ್ ಲೈನ್ಸ್ ಸಿಬ್ಬಂದಿ ಧೂಮಪಾನ ಮಾಡಿದ ಪ್ರಯಾಣಿಕನನ್ನು ಭದ್ರತಾ ಪಡೆಯ ವಶಕ್ಕೆ ನೀಡಿದ್ದಾರೆ. ಪ್ರಯಾಣಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.
ವಿಮಾನ ನಿಲ್ದಾಣದ ಭದ್ರತಾ ಪಡೆಯ ನಿರ್ಲಕ್ಷ್ಯದಿಂದ ಪದೇ ಪದೇ ವಿಮಾನಗಳಲ್ಲಿ ಧೂಮಫಾನ ಪ್ರಕರಣ ಪತ್ತೆಯಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಆಕಾಶದಲ್ಲಿ ಹಾರುವ ವೇಳೆ ಧೂಮಪಾನದಿಂದ ಅಗ್ನಿ ಅವಾಂತರವಾದರೆ ಯಾರು ಹೊಣೆ ಎನ್ನುವ ಆತಂಕ ಎದುರಾಗಿದೆ.
ವಿಮಾನದಲ್ಲಿ ಧೂಮಪಾನ: ಯುವಕನ ಬಂಧನ
Prasthutha|
![e5ca3248-3168-412b-9282-4b5d9a2ef7d9](https://prasthutha.com/wp-content/uploads/2023/03/e5ca3248-3168-412b-9282-4b5d9a2ef7d9.jpg)
![](https://prasthutha.com/wp-content/uploads/2022/10/Screenshot-from-2022-10-25-23-10-04.png)