Home ಟಾಪ್ ಸುದ್ದಿಗಳು ಮರಣವಾಗಿ ಆರು ತಿಂಗಳ ಬಳಿಕ ಕೋವಿಡ್ ಲಸಿಕ ಹಾಕಿಸಿದ ಸಂದೇಶ!

ಮರಣವಾಗಿ ಆರು ತಿಂಗಳ ಬಳಿಕ ಕೋವಿಡ್ ಲಸಿಕ ಹಾಕಿಸಿದ ಸಂದೇಶ!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಿತ್ತೂರು ನಿವಾಸಿಯೊಬ್ಬರು ಮೃತಪಟ್ಟು 6 ತಿಂಗಳ ಬಳಿಕ 2ನೇ ಡೋಸ್ ಕೋವಿಡ್ ಲಸಿಕೆ ತೆಗೊಂಡಿದ್ದಾರೆ! ಹೌದು, ಮರಣವಾದ ವ್ಯಕ್ತಿಯ ಮೊಬೈಲಿಗೆ ಆರು ತಿಂಗಳ ಬಳಿಕ ಎರಡನೇ ಲಸಿಕೆ ಪೂರ್ಣಗೊಂಡಿರುವ ಕುರಿತು ಸಂದೇಶವೊಂದು ಬಂದಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.

ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಅವರು ಎ. 27ರಂದು ಮೃತಪಟ್ಟಿದ್ದು, ಅವರು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ನಲ್ಲಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಅವರ ಪುತ್ರ ಸಾದಿಕ್ ಅವರ ಮೊಬೈಲ್‌ಗೆ ಅ. 14ಕ್ಕೆ ಪ್ರಾರಂಭದಲ್ಲಿ ಒಟಿಪಿ ಬಂದಿದ್ದು, ಅದರ ಬೆನ್ನಿಗೆ 2ನೇ ಡೋಸ್ ಪೂರ್ತಿಗೊಳಿಸಿರುವ ಸಂದೇಶ ಕೂಡ ಬಂದಿದೆ.

ಅದರಲ್ಲಿದ್ದ ಲಿಂಕ್ ತೆರೆದಾಗ ಪ್ರಮಾಣ ಪತ್ರ ಬಂದಿದ್ದು, ಅದರಲ್ಲಿ ಮಾಣಿಯಲ್ಲಿ ಲಸಿಕೆ ಪಡೆಯಲಾಗಿದೆ ಎಂದು ದಾಖಲಾಗಿದೆ. ಮರಣಿಸಿದ ವ್ಯಕ್ತಿಯ ಪುತ್ರನಿಗೆ 2 ತಿಂಗಳ ಮೊದಲು ಮಾಣಿ ಆರೋಗ್ಯ ಕೇಂದ್ರದಿಂದ ಕರೆ ಬಂದಿದ್ದು, ಹಸೈನಾರ್ ಅವರ 2ನೇ ಡೋಸ್ ಬಾಕಿ ಇದೆ ಎಂದಿದ್ದರು. ಆಗ ಪುತ್ರ ತನ್ನ ತಂದೆ ತೀರಿಕೊಂಡಿದ್ದಾರೆ ಎಂಬ ಉತ್ತರ ನೀಡಿದ್ದರು.ಈ ರೀತಿ 2ನೇ ಲಸಿಕೆ ಪಡೆಯದ ಇತರರಿಗೂ ಇಂತಹ ಸಂದೇಶ ಬಂದದ್ದು ವರದಿಯಾಗಿದೆ. ಐಡಿ ನಂಬರ್ ಹಾಕುವ ಸಂಖ್ಯೆ ವ್ಯತ್ಯಾಸದಿಂದ ಹೀಗಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Join Whatsapp
Exit mobile version