Home ಟಾಪ್ ಸುದ್ದಿಗಳು ಕುಖ್ಯಾತ ರೌಡಿ ಸ್ಯಾಮುಯಲ್ ಗೆ ಗುಂಡಿಕ್ಕಿ ಸೆರೆ !

ಕುಖ್ಯಾತ ರೌಡಿ ಸ್ಯಾಮುಯಲ್ ಗೆ ಗುಂಡಿಕ್ಕಿ ಸೆರೆ !

ಬೆಂಗಳೂರು: ಕೊಲೆ,ಕೊಲೆಯತ್ನ, ಸುಲಿಗೆ,ಬೆದರಿಕೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಸ್ಯಾಮುಯಲ್ ಗೆ ಮೇಲೆ ಅಮೃತಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಅಪರಾಧ ಪ್ರಕರಣಗಳ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿ ಸ್ಯಾಮುಯಲ್​ ಸಂಪಿಗೆಹಳ್ಳಿ ಬಳಿ ಅಡಗಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸಲು ಅಮೃತಹಳ್ಳಿ ಪೊಲೀಸರು ತೆರಳಿದ್ದರು.
ಈ ವೇಳೆ ಪಿಎಸ್​ಐ ಪ್ರಕಾಶ್ ಎಂಬುವವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು,ಕೂಡಲೇ ಇನ್ಸ್​ಪೆಕ್ಟರ್ ಗುರುಪ್ರಸಾದ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.


ಆದರೂ ರೌಡಿ ಸ್ಯಾಮುಯಲ್​ ಹಲ್ಲೆ ಮುಂದುವರೆಸಿ‌ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ‌ಸುತ್ತು ಗುಂಡು ಹಾರಿಸಿದ್ದು ಅದು ಕಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.ಗಾಯಗೊಂಡ ಪಿಎಸ್​ಐ ಪ್ರಕಾಶ್ ಹಾಗೂ ಸ್ಯಾಮುಯಲ್​ಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರೌಡಿ ಸ್ಯಾಮುಯಲ್ 8 ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿದ್ದು‌ಸಂಪಿಗೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಸಿಕೆ‌ ಬಾಬಾ ತಿಳಿಸಿದ್ದಾರೆ.

Join Whatsapp
Exit mobile version