ನವದೆಹಲಿ: ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸವಾಲಾಗಿ ನೋಡುತ್ತಿದೆ. ಎಎಪಿಯನ್ನು ಹತ್ತಿಕ್ಕಲು ‘ಆಪರೇಷನ್ ಜಾದು’ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಬೆಳವಣಿಗೆ ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ಚಿಂತೆಗೀಡಾದ್ದಾರೆ. ಎಎಪಿಯನ್ನು ಹತ್ತಿಕ್ಕಲು ಬಿಜೆಪಿಯವರು ಆಪರೇಷನ್ ಜಾದು ಅಭಿಯಾನವನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ನಮ್ಮ ಕಚೇರಿಗಳನ್ನು ವಶಪಡಿಸಿಕೊಂಡು ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸುವ ಸಾಧ್ಯತೆಯಿದೆ ಎಂದರು.
ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ದೊಡ್ಡ ಸವಾಲುಗಳು ನಮಗೆ ಎದುರಾಗಲಿದೆ. ಅದನ್ನು ಎದುರಿಸಲು ಎಲ್ಲರೂ ಸಿದ್ದರಾಗಬೇಕಿದೆ. ನೆನಪಿಡಿ ನಮಗೆ ಹನುಮಂತನ ಆಶೀರ್ವಾದವಿದೆ. ನಾವು ಸಮಾಜಕ್ಕಾಗಿ ಕೆಲಸ ಮಾಡುವುದರಿಂದ ಸತ್ಯದ ಹಾದಿಯಲ್ಲಿಯೇ ನಡೆಯಬೇಕಿದೆ’ ಎಂದು ಹೇಳಿದರು.