Home ಟಾಪ್ ಸುದ್ದಿಗಳು ಮಸೀದಿ ಕೆಡವಿದಾಗ ದೇವಾಲಯ ಪತ್ತೆ| ವಾಸ್ತವವೇನು?

ಮಸೀದಿ ಕೆಡವಿದಾಗ ದೇವಾಲಯ ಪತ್ತೆ| ವಾಸ್ತವವೇನು?


ಗದಗ: ರಾಯಚೂರಿನಲ್ಲಿ ಮಸೀದಿಯನ್ನು ಕೆಡವಿದ ಸ್ಥಳದಲ್ಲಿ ದೇವಸ್ಥಾನ ಪ್ರತ್ಯಕ್ಷವಾಗಿದೆ ಎಂಬ ಫೋಟೋವೊಂದು ವೈರಲ್ ಆಗಿದ್ದು, ಅನೇಕರು ವಿಭಿನ್ನ ಅಭಿಪ್ರಾಯಗಳೊಂದಿಗೆ ಅದನ್ನು ಹಂಚಿಕೊಂಡಿದ್ದಾರೆ.


ಭಾರತದಲ್ಲಿ ಹಳೆಯ ಮಸೀದಿಗಳನ್ನು ಕೆಡವಿದ ಜಾಗದಲ್ಲಿ ಐತಿಹಾಸಿಕ, ಪುರಾತನ ದೇವಸ್ಥಾನವನ್ನು ಕಾಣಬಹುದೆ ಎಂಬ ವದಂತಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮೊಘಲರು ಪವಿತ್ರ ಮಂದಿರಗಳನ್ನು ಒಡೆದು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬ ಕಟ್ಟುಕಥೆಯನ್ನು ಸಂಘಪರಿವಾರ ಹೆಣೆಯುತ್ತಾ ಬಂದಿದೆ. ಈ ಮೂಲಕ ದೇಶದಲ್ಲಿ ನಿರಂತರ ಕೋಮು ಗಲಭೆ ಸೃಷ್ಟಿಸಿದೆ.
ಪ್ರಸಕ್ತ ರಾಯಚೂರಿನಲ್ಲಿ ಕೂಡ ಇಂತಹದೇ ಒಂದು ದೇವಸ್ಥಾನ ಪತ್ತೆಯಾಗಿದ್ದು, ಇದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಆಲ್ಟ್ ನ್ಯೂಸ್ ವಾಟ್ಸಾಪ್ ಸಹಾಯವಾಣಿ (91 76000 11160) ನಡೆಸಿದ ಪ್ರಯತ್ನದಿಂದ ನಿಜಾಂಶ ಹೊರಬಿದ್ದಿದೆ.


ಇದರ ನೈಜ್ಯತೆ
ಈ ಚಿತ್ರ ಕಲಾವಿದನೊಬ್ಬನಿಂದ ಸೃಷ್ಟಿಯಾದ ಒಂದು ಕಲಾಕೃತಿಯಾಗಿದೆ ಎಂಬುದು ವಾಸ್ತವವಾಗಿದೆ. ಚಿತ್ರದ ಕೆಳಗೆ ‘chandra colourist’ ಎಂಬ ಲೋಗೋ ಇದೆ. ಚಿತ್ರದ ಕೆಳಗೆ chandra colourist ಹೆಸರಿನ ಖಾತೆಯಲ್ಲಿ ಮೇ 8, 2016ರಲ್ಲಿ ಪೋಸ್ಟ್‌ ಮಾಡಲಾಗಿದೆ. ‘ಇದು ಎಲ್ಲಿಯ ಫೋಟೋ’ ಎಂದು ಬಂದಿರುವ ಕಮೆಂಟ್‌ಗೆ ‘ಇದು ನನ್ನ ಡಿಜಿಟಲ್‌ ಕಲಾಕೃತಿ’ ಎಂದು ಕಲಾವಿದ ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.
ಫೋಟೋದ ಬಗ್ಗೆ ಮತ್ತಷ್ಟು ಹುಡುಕಿದಾಗ ಫೋಟೋಗ್ರಾಫರ್ Meiqianbao ಅವರು ಕ್ಲಿಕ್ಕಿಸಿರುವ ಫೋಟೋವೊಂದು ಗೂಗಲ್‌ನಲ್ಲಿ ಸಿಕ್ಕಿದ್ದು, ಅದು ಚಂದ್ರು ಅವರ ಕಲಾಕೃತಿಗೆ ಪ್ರೇರಣೆಯಾಗಿರುವ ಫೋಟೋ ಆಗಿರಬಹುದು. ಈ ಎರಡೂ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ನೈಜ್ಯತೆಯನ್ನು ಗಮನಿಸಬಹುದೆಂದು ಆಲ್ಟ್ ನ್ಯೂಸ್ ತಿಳಿಸಿದೆ.
ಅಮೆರಿಕ ಮೂಲದ ಫೋಟೋ ಶೇಖರಣೆ ಏಜೆನ್ಸಿ ‘ ಶಟ್ಟರ್ ಸ್ಟಾಕ್’ ಅನ್ವಯ ಚೀನಾದ ಹೆನಾನ್ ಲುವೊಯಾಂಗ್ ನಲ್ಲಿರುವ ಲಾಂಗ್ ಮೆನ್ ಗ್ರೊಟ್ಟೋಸ್ – ಫೆಂಗ್ ಕ್ಸಿಯಾಂಗ್ ಬುದ್ಧನ ವಿಗ್ರಹವಾಗಿದೆ.

ಇದನ್ನೇ ರಾಯಚೂರಿನಲ್ಲಿ ಮಸೀದಿಯನ್ನು ಧ್ವಂಸಗೈದ ಸಂದರ್ಭದಲ್ಲಿ ಸಿಕ್ಕಿದ ದೇವಸ್ಥಾನ ಎಂದು ಬಿಂಬಿಸಲಾಗುತ್ತಿದೆ. ಈ ವೇಳೆ ಮತ್ತೊಂದು ಪ್ರಶ್ನೆಯನ್ನು ಹುಟ್ಟು ಹಾಕಿದ್ದು, ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ ಎಂಬುದನ್ನು ಪರಿಶೀಲನೆ ನಡೆಸಿದಾಗ ಇದು ಫೇಕ್ ಎಂದು ಬಹಿರಂಗವಾಗಿದೆ.
ಪ್ರಸ್ತುತ ಈ ಫೋಟೋವನ್ನು ಉಮಾ ಗಾರ್ಗಿ ಎಂಬವರು 2016 ರಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಈ ಸಂಬಂಧ ಅನೇಕರು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ರೀತಿ ಫೇಸ್ಬುಕ್ ನಲ್ಲಿ ರಮಣಿ ಪರಶುರಾಮನ್ ಅವರು 3 ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಹಂಚಿಕೊಂಡಿದ್ದರು.


2016 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕ ಒಂದೇ ರೀತಿಯ ಪಠ್ಯವನ್ನು ಹೊಂದಿರುವ ವಿಭಿನ್ನ ಚಿತ್ರಗಳನ್ನು ಕಂಡಿರುವುದಾಗಿ ಆಲ್ಟ್ ನ್ಯೂಸ್ ತಿಳಿಸಿದೆ.
ಫೇಕ್ ನ್ಯೂಸ್ ವೆಬ್ ಸೈಟ್ ‘ ಪೋಸ್ಟ್ ಕಾರ್ಡ್’ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ, ಕೆ.ಪಿ ಗಣೇಶ್ ( ಮೋದಿ ಹಿಂಬಾಲಕರು) ರಸ್ತೆ ಅಗಲೀಕರಣಕ್ಕಾಗಿ ಮಸೀದಿ ಧ್ವಂಸ ಮಾಡಿದಾಗ ದೇವಸ್ಥಾನ ಪ್ರತ್ಯಕ್ಷವಾಗಿದೆ ಎಂಬ ಫೋಟೋವನ್ನು ಹಂಚಿಕೊಂಡಿದ್ದರು.
ಕಾಂಗ್ರೆಸ್ ಮುಕ್ತ್ ಭಾರತ್ ಟ್ವಿಟ್ಟರ್ ಖಾತೆಯಲ್ಲಿ ಇದೇ ಶೈಲಿಯಲ್ಲಿ ಏಪ್ರಿಲ್ 11, 2016 ರಂದು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು 150 ಕ್ಕೂ ಅಧಿಕ ಬಾರಿ ಮರು ಟ್ವೀಟ್ ಮಾಡಲಾಗಿದೆ. Struggle for Hindu Existence’ ಎಂಬ ವೆಬ್‌ಸೈಟ್‌ನಲ್ಲಿ ಲೇಖನವನ್ನೂ ಇದೇ ಅಭಿಪ್ರಾಯ ಬರುವಂತೆ ಬರೆಯಲಾಗಿದೆ.

2016ರಲ್ಲಿ ರಸ್ತೆ ಅಗಲೀಕರಣ ಮಾಡಲು ಆದೇಶಿಸಿದ್ದ ಹಿಂದಿನ ಜಿಲ್ಲಾಧಿಕಾರಿಯನ್ನು ಆಲ್ಟ್‌ ನ್ಯೂಸ್ ಸಂಪರ್ಕಿಸಿದ್ದು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಕೆಲವು ಸಾಂಪ್ರಾದಾಯಿಕ ಕಟ್ಟಡಗಳು ಕಂಡುಬಂದಿದ್ದವು. ಹಳೆಯ ಮಾದರಿಯ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಅಂತಹ ಹಳೆಯ ರಚನೆಗಳ ಕೆತ್ತನೆಗಳನ್ನು ಹೊಂದಿದೆ. ಮಾತ್ರವಲ್ಲ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ಮಾಹಿತಿ ಸುಳ್ಳು. ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ರೀತಿ ಬಿಂಬಿಸಲು ಯತ್ನಿಸುತ್ತಿದೆ. ಇದರ ನೈಜತೆ ಬಹಿರಂಗವಾದಾಗ ಅವರು ತಮ್ಮ ದೋರಣೆಯನ್ನು ನಿಲ್ಲಿಸಿದರು ಎಂದು ಆಲ್ಟ್ ನ್ಯೂಸ್ ಗೆ ಅಂದಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Join Whatsapp
Exit mobile version