Home ಟಾಪ್ ಸುದ್ದಿಗಳು ಸೈಫ್ ಅಲಿ ಖಾನ್ ಪ್ರಕರಣ: ಬಂಧಿತ ವ್ಯಕ್ತಿ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕಾಂಗ್ರೆಸ್

ಸೈಫ್ ಅಲಿ ಖಾನ್ ಪ್ರಕರಣ: ಬಂಧಿತ ವ್ಯಕ್ತಿ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕಾಂಗ್ರೆಸ್

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಆರೋಪಿ ಯಾರೆಂಬುದನ್ನು ಪೊಲೀಸರು ಸ್ಪಷ್ಟಪಡಿಸುವಂತೆ ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.

ಪ್ರಕರಣದ ತನಿಖೆಯನ್ನು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಬಂಧಿತ ವ್ಯಕ್ತಿಗೂ ಹಾಗೂ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವ ವ್ಯಕ್ತಿಗೂ ಸಾಮ್ಯತೆ ಇದೆಯೇ? ಎಂದು ಕೇಳಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸೈಫ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಆದರೆ ಈ ಬಗ್ಗೆ ಬಂಗಾಳಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಶರೀಫುಲ್ ತಂದೆ ಮೊಹಮ್ಮದ್ ರುಹುಲ್ ಅಮೀನ್ ಫಕೀರ್, ರಾಜಕೀಯ ಬಿಕ್ಕಟ್ಟಿನ ಕಾರಣ ನನ್ನ ಮಗ ಬಾಂಗ್ಲಾದೇಶವನ್ನು ತೊರೆದು ಉದ್ಯೋಗ ಅರಸಿ ಭಾರತಕ್ಕೆ ತೆರಳಿದ್ದಾನೆ. ಆತನ ಬಳಿ ಯಾವುದೇ ಮಾನ್ಯ ದಾಖಲೆಗಳಿಲ್ಲ. ಅಲ್ಲಿ ಯಾರೋ ಒಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ, ಆತನ್ನು ಬಂಧಿಸಲಾಗಿದೆ. ಆದರೆ ಸಿಸಿಟಿವಿಯಲ್ಲಿರುವ ವ್ಯಕ್ತಿ ನನ್ನ ಮಗನಲ್ಲ ಎಂದು ಹೇಳಿದ್ದಾರೆ.


ಇದನ್ನೆಲ್ಲ ನಾನು ಟಿವಿ ಚಾನೆಲ್ನಲ್ಲಿ ನೋಡಿದ್ದೇನೆ. ಹಾಗಾಗಿ ಮುಂಬೈ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಪಟೋಲೆ ಆಗ್ರಹಿಸಿದ್ದಾರೆ.

Join Whatsapp
Exit mobile version