ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, “ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಕಾನೂನು ಇಬ್ಬರಿಗೂ ಇದೆ. ಬ್ಯಾಂಕ್ ನಿಯಮ ಪ್ರಕಾರ ರಿಕವರಿಗೆ ಕಾನೂನು ಇದೆ. ಅವರ ರಕ್ಷಣೆ ಮಾಡೋಕೆ ಕಾನೂನು ಇದೆ. ಕಾನೂನು ಕಠಿಣವಾಗಿಲ್ಲ ಎಂಬ ವರದಿ ಇದೆ. ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ. ಕಿರುಕುಳ ಆಗುತ್ತಿರುವುದನ್ನು ನಿಲ್ಲಿಸಲಾಗುತ್ತದೆ” ಎಂದು ಭರಸವೆ ನೀಡಿದರು.
“ಸಾಲ ವಾಪಸ್ ಕಟ್ಟದೆ ಹೋದರೆ ಹೀಗೆ ಆಗುತ್ತದೆ. ಬ್ಯಾಂಕ್ ಸಾಲ ಪಡೆದಾಗ ಹತ್ತಾರು ಕಡೆ ಸಹಿ ಹಾಕಲಾಗುತ್ತದೆ. ಯಾಕೆ ಸಹಿ ಮಾಡುತ್ತೇವೆ ಅಂತ ಗ್ರಾಹಕರಿಗೆ ಗೊತ್ತಾಗಲ್ಲ. ಅದು ಕಮಿಟ್ಮೆಂಟ್ ಆಗಿರುತ್ತದೆ. ಅದರ ಮೇಲೆ ಮನೆ ರೇಡ್, ಸೀಜ್ ಮಾಡುತ್ತಾರೆ. ಕಾನೂನಿನಲ್ಲಿ ಪರಿಹಾರ ಕಂಡು ಹಿಡಿಯಬೇಕು. ಸಿಎಂ ಸಹ ಹೇಳಿಕೆ ಕೊಟ್ಟಿದ್ದಾರೆ. ಒಂದು ಸಭೆ ಕರೆಯುತ್ತೇವೆ ಅಂದಿದ್ದಾರೆ. ಎಷ್ಟು ಕೇಸ್ ಇದೆ ನೋಡುತ್ತೇವೆ” ಎಂದರು.