ದೇಶ ರಕ್ಷಣೆಗೆ ಪ್ರತಿಯೊಬ್ಬರಿಗೂ ಶಸ್ತ್ರಾಸ್ತ್ರ ಪೂರೈಕೆ: ಉಕ್ರೇನ್ ಅಧ್ಯಕ್ಷ ಘೋಷಣೆ

Prasthutha|

ಕೀವ್: ರಷ್ಯಾ ನಡೆಸುತ್ತಿರುವ ದಾಳಿಯಿಂದ ದೇಶವನ್ನು ರಕ್ಷಿಸಲು ಬಯಸುವ ಪ್ರತಿಯೊಬ್ಬರಿಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನಗರಗಳ ರಸ್ತೆಗಳಲ್ಲಿ ಉಕ್ರೇನ್ ಸಂರಕ್ಷಣೆಗೆ ಸಿದ್ಧವಾಗಿರಿ. ಈ ವೇಳೆ ದೇಶವನ್ನು ರಕ್ಷಿಸುವ ಬಯಸುವ ಪ್ರತಿಯೊಬ್ಬರಿಗೂ ನಾವು ಶಸ್ತ್ರಾಸ್ತ್ರ ಪೂರೈಸುತ್ತೇವೆ ಎಂದು ತಿಳಿಸಿದ್ದಾರೆ.

ದೇಶವನ್ನು ರಕ್ಷಿಸಲು ಸಿದ್ಧರಾಗುವ ನಾಗರಿಕರಿಗೆ ಶಸ್ತ್ರಾಸ್ತ್ರ ಮೇಲಿನ ನಿರ್ಬಂಧಗಳನ್ನು ತೊಡೆದು ಹಾಕುವುದಾಗಿ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ.

- Advertisement -

ನಾವು ರಷ್ಯಾದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗಿದೆ. ಮಾನವೀಯತೆಯನ್ನು ಕಳೆದುಕೊಳ್ಳದ ಎಲ್ಲಾ ರಷ್ಯನ್ ನಾಗರಿಕರು ಈ ಯುದ್ಧದ ವಿರುದ್ಧ ಪ್ರತಿಭಟಿಸುವಂತೆ ಉಕ್ರೇನ್ ಅಧ್ಯಕ್ಷರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಈ ಮಧ್ಯೆ ರಷ್ಯಾದ ನಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಹಲವು ಜಾಗತಿಕ ನಾಯಕರು ಖಂಡಿಸಿದ್ದಾರೆ.

Join Whatsapp
Exit mobile version