Home ಟಾಪ್ ಸುದ್ದಿಗಳು ಪ್ರತ್ಯೇಕ ಜಿಲ್ಲೆ ಘೋಷಿಸುವವರೆಗೆ ಪಾದರಕ್ಷೆ ಧರಿಸಲಾರೆ: ಕಾಂಗ್ರೆಸ್ ಶಾಸಕನ ಶಪಥ !

ಪ್ರತ್ಯೇಕ ಜಿಲ್ಲೆ ಘೋಷಿಸುವವರೆಗೆ ಪಾದರಕ್ಷೆ ಧರಿಸಲಾರೆ: ಕಾಂಗ್ರೆಸ್ ಶಾಸಕನ ಶಪಥ !

ರಾಜಸ್ಥಾನ: ‘ಬಾಲೋತ್ರಾ’ವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡುವವರೆಗೂ ಪಾದರಕ್ಷೆ ಧರಿಸುವುದಿಲ್ಲ ಎಂದು ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಪಚ್’ಪಾದ್ರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮದನ್ ಪ್ರಜಾಪತ್ ಶಪಥ ಮಾಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಡಿಸಿದ ಬಜೆಟ್’ಅನ್ನು ಸ್ವಾಗತಿಸಿರುವ ಶಾಸಕ ಮದನ್, ಬಾಲೋತ್ರಾ’ವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡದೇ ಇರುವುದಕ್ಕೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.


ಕಳೆದ 40 ವರ್ಷಗಳಿಂದ ಪ್ರತ್ಯೇಕ ಜಿಲ್ಲೆಯ ರಚನೆಗಾಗಿ ಹೋರಾಟ ಮಾಡುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಬೇಡಿಕೆ ಅಲ್ಲ. 36 ಸಮುದಾಯಗಳ ಒಕ್ಕೊರಲಿನ ಬೇಡಿಕೆಯಾಗಿದೆ ಎಂದು ಶಾಸಕ ಮದನ್ ಹೇಳಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಗುರುವಾರ ಶಾಸಕ ಮದನ್ ಪಾದರಕ್ಷೆ ಧರಿಸದಯೇ ಹಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ಆರಂಭಿಸಿದ್ದಾರೆೆ.

Join Whatsapp
Exit mobile version