ಮುಂಬಯಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಸತಾರಾದ ಜಾವಲಿ ತಾಲೂಕಿನವರುವರು. ಪಿಯುಸಿ ಓದಿದ ಅವರು ತಮ್ಮ ಕುಟುಂಬವನ್ನು ಪೋಷಿಸಲು ಆಟೋರಿಕ್ಷಾ ಓಡಿಸುತ್ತಿದ್ದರು ಎಂದರೆ ನಂಬಲೇಬೇಕು.
18 ನೇ ವಯಸ್ಸಿನಲ್ಲಿ ಶಿವಸೇನೆ ಸೇರಿದ ಶಿಂಧೆಗೆ 1997 ರಲ್ಲಿ ಥಾಣೆ ಮುನ್ಸಿಪಲ್ ಚುನಾವಣೆಯಲ್ಲಿ ಕೌನ್ಸಿಲರ್ ಟಿಕೆಟ್ ನೀಡಲಾಯಿತು. ಮುನ್ಸಿಪಲ್ ಚುನಾವಣೆಗಳಲ್ಲಿ ಜಯಗಳಿಸಿದ್ದಲ್ಲದೆ ಕಾರ್ಪೊರೇಷನ್ ಹೌಸ್ ನ ಲೀಡರ್ ಆದರು. ನಂತರ 2004 ರಲ್ಲಿ, ಅವರು ಥಾಣೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 2009 ರಿಂದ, ಅವರು ಪ್ರತಿಬಾರಿಯೂ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಫಡ್ನವಿಸ್ ಸರ್ಕಾರದಲ್ಲಿ ಪಿಡಬ್ಲ್ಯಡಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅವರು, , 2019ರಲ್ಲಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವರಾಗಿ, ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೊಪ್ರಿ ಪಚ್ಪಪಖಾಡಿ ವಿಧಾನಸಭಾ ಕ್ಷೇತ್ರವನ್ನು ನಾಲ್ಕನೇ ಅವಧಿಗೆ ಪ್ರತಿನಿಧಿಸುತ್ತಿರುವ 58 ರ ಹರೆಯದ ಶಿಂಧೆ ಇದೀಗ ಮಹಾರಾಷ್ಟ್ರದ ಮುಖ್ಯಮಮತ್ರಿಆಗಿದ್ದಾರೆ. ಶಿವಸೇನೆಯ ಸ್ಥಾಪಕ ಬಾಳಾಠಾಕ್ರೆಯ ಪುತ್ರ ಉದ್ದವ್ ಠಾಕ್ರೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಮೆಟ್ಟಿಲಾಗಿ ಪರಿಣಮಿಸಿದೆ.