Home ಟಾಪ್ ಸುದ್ದಿಗಳು ಹರಿಯಾಣ: ಕಾಂಗ್ರೆಸ್ ಹಿರಿಯ ನಾಯಕಿ, ಶಾಸಕಿ ಕಿರಣ್ ಚೌಧರಿ ಹಾಗೂ ಪುತ್ರಿ ಮಾಜಿ ಸಂಸದೆ ಬಿಜೆಪಿ...

ಹರಿಯಾಣ: ಕಾಂಗ್ರೆಸ್ ಹಿರಿಯ ನಾಯಕಿ, ಶಾಸಕಿ ಕಿರಣ್ ಚೌಧರಿ ಹಾಗೂ ಪುತ್ರಿ ಮಾಜಿ ಸಂಸದೆ ಬಿಜೆಪಿ ಸೇರ್ಪಡೆ

ಚಂಡೀಗಢ: ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿರುವಂತೆಯೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಶಾಸಕಿ ಕಿರಣ್ ಚೌಧರಿ ಹಾಗೂ ಪುತ್ರಿ ಶೃತಿ ಚೌಧರಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕಿರಣ್ ಚೌದರಿಯ ಪುತ್ರಿ, ಮಾಜಿ ಸಂಸದೆ ಶೃತಿ ಚೌಧರಿ ಹರಿಯಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದಾರೆ.

ಈ ವಿಚಾರವನ್ನು ದೃಢಪಡಿಸಿರುವ ಕಿರಣ್ ಚೌಧರಿ, ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರ ಸೊಸೆಯೂ ಆದ ಕಿರಣ್ ಚೌಧರಿ ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರೊಂದಿಗೆ ಭಿನ್ನಮತಹೊಂದಿದ್ದಾರೆ. ಇತ್ತೀಚೆಗೆ ಲೋಕಸಭೆ ಚುನಾವಣೆ ಮುಗಿದ ನಂತರ ಭಿವಾನಿ-ಮಹೇಂದ್ರಗಢ ಕ್ಷೇತ್ರದಿಂದ ಶ್ರುತಿ ಚೌಧರಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version