ಮಂಗಳೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಸೇವೆ ಅದ್ವಿತೀಯ: ಪ್ರಭಾಕರ್ ಶರ್ಮಾ ಮೆಚ್ಚುಗೆ

Prasthutha|

ಮಂಗಳೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ವತಿಯಿಂದ ಪದಾಧಿಕಾರಿಗಳ ‘ಪ್ರೊಪೆಲ್ 2021’ ಸ್ನೇಹ ಸಮ್ಮಿಲನ, ಸಂವಾದ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಕೋಸ್ಟಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್ ಶರ್ಮಾ, ದಕ್ಷಿಣ ಕನ್ನಡ ಜಿಲ್ಲೆಯು ರಕ್ತ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಗಳಿಸಿದ್ದು, ಇದೆಲ್ಲವೂ ಸಾಧ್ಯವಾಗಿದ್ದು ಜಿಲ್ಲೆಯ ಜನತೆಯ ನೆರವಿನಿಂದಾಗಿದೆ. ಕೋವಿಡ್ ಸಮಯದಲ್ಲಿ ಸಾಕಷ್ಟು ಬಗೆಯ ಸವಾಲುಗಳನ್ನೂ ಎದುರಿಸಿದ್ದರೂ ರಕ್ತದ ಅಭಾವ ಎದುರಾಗದಂತೆ ಕಾರ್ಯ ನಿರ್ವಹಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಪಾಪ್ಯಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಸೇವೆ ಅದ್ವಿತೀಯ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೇ, ಸಮಾಜಮುಖಿ ಕಾರ್ಯದಲ್ಲಿ ಯಾವತ್ತೂ ಹಿಂದೆ ಸರಿಯದೇ ಸೇವೆಯು ನಿರಂತರವಾಗಿರಲಿ ಅಂತಾ ಶುಭ ಹಾರೈಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 15ರಿಂದ ಸೆಪ್ಟಂಬರ್ 15ರ ವರೆಗೆ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ರಾಜ್ಯಾದ್ಯಂತ 129 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿ ದಾಖಲೆಯ 8,534 ಯುನಿಟ್ ರಕ್ತವನ್ನು ಸಂಗ್ರಹಿಸಿತ್ತು. ಈ ಶಿಬಿರಗಳಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹಿಸಿ ಪ್ರಥಮ ಸ್ಥಾನ ಪಡೆದ ಉಳ್ಳಾಲ ವಲಯ ಬ್ಲಡ್ ಡೋನರ್ಸ್ ಫೋರಂ ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಪ್ರಶಸ್ತಿ ನೀಡಿ ಅಭಿನಂದಿಸಿದರು.

- Advertisement -

ಅಲ್ಲದೇ ದ್ವಿತೀಯ ಸ್ಥಾನ ಪಡೆದ ಬಜ್ಪೆ ಹಾಗೂ ಅನಂತರದ ಸ್ಥಾನಗಳನ್ನು ಪಡೆದ ಹುಮ್ನಾಬಾದ್ (ಬೀದರ್), ಜೋಕಟ್ಟೆ ಹಾಗೂ ಕಾವೂರು ವಲಯಗಳ ಪದಾಧಿಕಾರಿಗಳಿಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಕಾರ್ಯಕ್ರಮವನ್ನು ಉದ್ದೇಶಿಸಿ ವೆನ್ಲಾಕ್ ಆಸ್ಪತ್ರೆ ಕೋವಿಡ್ ವಿಭಾಗದ ನೋಡಲ್ ಅಧಿಕಾರಿ ಡಾ. ಶರತ್ ಬಾಬು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ರಾಜ್ಯ ಸಂಚಾಲಕ ಅಬು ಸಿನಾನ್ ಮಾತನಾಡಿದರು.  

Join Whatsapp
Exit mobile version