Home ಟಾಪ್ ಸುದ್ದಿಗಳು ಮಡಿಕೇರಿ | ಕೋಟೆಬೆಟ್ಟದಲ್ಲಿ ಪುತ್ತೂರಿನ ಪ್ರವಾಸಿಗರಿಗೆ ಹಲ್ಲೆ..!

ಮಡಿಕೇರಿ | ಕೋಟೆಬೆಟ್ಟದಲ್ಲಿ ಪುತ್ತೂರಿನ ಪ್ರವಾಸಿಗರಿಗೆ ಹಲ್ಲೆ..!

‘ಚಿನ್ನ ಕಳ್ಳತನವಾಗಿಲ್ಲ, ಬಿದ್ದು ಹೋಗಿದೆ’: ಪೊಲೀಸ್ ಇಲಾಖೆ ಸ್ಪಷ್ಟನೆ

ಮಡಿಕೇರಿ: ಪುತ್ತೂರಿನ ಕುಟುಂಬವೊಂದು ಮಕ್ಕಳು, ಮಹಿಳೆಯರೊಂದಿಗೆ ಸೋಮವಾರಪೇಟೆಯ ಕೋಟಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿಸಿದ್ದು, ಆ ಕುಟಂಬದ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಪುಂಡರು ಹಲ್ಲೆ ನಡೆಸಿ, ಚಿನ್ನದ ಸರ ಎಗರಿಸಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದು, ಕೋಟೆಬೆಟ್ಟದಲ್ಲಿ ಇಂದು ಬೆಳಿಗ್ಗೆ ಪ್ರವಾಸಿಗರು ಮತ್ತು ಇಬ್ಬರು ವ್ಯಕ್ತಿಗಳಿಂದ ಕ್ಷುಲ್ಲಕ ಕಾರಣದಿಂದ ಗಲಾಟೆ ನಡೆದಿದ್ದು, ಈ ಸಂದರ್ಭ ಯುವತಿಯ ಚಿನ್ನದ ಸರ ಬಿದ್ದುಹೋಗಿರುವುದೇ ವಿನಃ ಅದನ್ನು ಕಿತ್ತುಕೊಂಡಿರುವುದಿಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.ಈ ಗಲಾಟೆಯಲ್ಲಿ ಒಬ್ಬಳು ಯುವತಿಯು ಧರಿಸಿದ್ದ ಚಿನ್ನದ ಸರ ಆಕೆಗೆ ತಿಳಿಯದಂತೆ ಬಿದ್ದು ಹೋಗಿರುವುದಾಗಿ ಮತ್ತು ನಂತರ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಎಂದು ದೂರು ನೀಡಿದ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ ಹಾಗೂ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಹೇಳಿದೆ.

Join Whatsapp
Exit mobile version