ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅದಾನಿ ಸಂಪತ್ತು ಹೆಚ್ಚಾಗಿದ್ದು ಹೇಗೆ : ರಾಹುಲ್ ಗಾಂಧಿ ವಾಗ್ಧಾಳಿ

Prasthutha|

ಕೊರೋನಾ ಸೋಂಕಿನಿಂದ ಇಡೀ ದೇಶವೇ ತತ್ತರಿಸುತ್ತಿದ್ದು ದೇಶದ ಆರ್ಥಿಕತೆಯೇ ತಲೆಕೆಳಗಾಗಿರುವಾಗ ಅದಾನಿ ಅವರ ಸಂಪತ್ತು ಮಾತ್ರ ಏರಿಕೆಯಾಗಿ ಅದಾನಿ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದು ಹೇಗೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಈ ವರ್ಷ ತಮ್ಮ ಸಂಪತ್ತನ್ನು 50 ಶೇಕಡಾ ಹೆಚ್ಚಿಸಿಕೊಂಡಿದ್ದಾರೆ. ತನ್ನ ಸಂಪತ್ತನ್ನು ಹೆಚ್ಚಿಸುವುದರಲ್ಲಿ ವಿಶ್ವದ ಅತ್ಯಂತ ಶ್ರೀಮಂತರಾದ ಅದಾನಿ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರನ್ನು ಮೀರಿಸಿದ್ದಾರೆ. ಅದಾನಿಯ ಸಂಪತ್ತಿನ ಹೆಚ್ಚಳದ ಸುದ್ದಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “2020 ರಲ್ಲಿ ನಿಮ್ಮ ಸಂಪತ್ತು ಎಷ್ಟು ಬೆಳೆದಿದೆ? ಶೂನ್ಯ ! ನೀವು ಜೀವಂತವಾಗಿರಲು ಹೆಣಗಾಡುತ್ತೀರಿ. ಆದರೆ ಆದಾನಿ 12 ಲಕ್ಷ ಕೋಟಿ ರೂ. ಗಳಿಸಿದ್ದಾರೆ ಮತ್ತು ಅವರ ಸಂಪತ್ತನ್ನು 50 ಶೇಕಡಾ ಹೆಚ್ಚಿಸಿದ್ದಾರೆ ಅದು ಹೇಗೆ ಎಂದು ಹೇಳಬಲ್ಲಿರಾ? ” ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

- Advertisement -

ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಲ್ಲಿ ಅದಾನಿಯ ಬಂದರುಗಳ ವ್ಯವಹಾರ ಮತ್ತು ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಾಗಿ ಅವರ ಷೇರುಗಳು ಉತ್ಕರ್ಷವನ್ನು ಕಂಡಿವೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ವರದಿ ಮಾಡಿದೆ.

Join Whatsapp
Exit mobile version