Home ಟಾಪ್ ಸುದ್ದಿಗಳು ಹಾಡಹಗಲೇ ನಡುರಸ್ತೆಯಲ್ಲಿ ಸ್ಪ್ಯಾನರ್‌ನಿಂದ ಹೊಡೆದು ಯುವತಿಯ ಬರ್ಬರ ಹತ್ಯೆ

ಹಾಡಹಗಲೇ ನಡುರಸ್ತೆಯಲ್ಲಿ ಸ್ಪ್ಯಾನರ್‌ನಿಂದ ಹೊಡೆದು ಯುವತಿಯ ಬರ್ಬರ ಹತ್ಯೆ

ಮುಂಬೈ: ಹಾಡಹಗಲೇ ನಡುರಸ್ತೆಯಲ್ಲಿ ಯುವಕನೋರ್ವ ಯುವತಿಯನ್ನು ಸ್ಪ್ಯಾನರ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ವಾಸೈನ ಚಿಂಚ್‌ಪಾಡದಲ್ಲಿ ಇಂದು ಮುಂಜಾನೆ ನಡೆದಿದೆ.

ಭೀಕರವಾಗಿ ದಾಳಿಗೊಳಪಟ್ಟ ಯುವತಿ ನರಳಿ ನರಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಆಕೆಯ ಶವ ಬಳಿ ಹಂತಕ, ನನ್ನ ಬಾಳಲ್ಲಿ ಏಕೆ ಆಟವಾಡಿದೆ. ನನ್ನ ಜೊತೆ ಹಾಗೇಕೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾನೆ.

29 ವರ್ಷದ ಯುವಕ ಯುವತಿಯ ಎದೆ ಹಾಗೂ ತಲೆಯ ಮೇಲೆ ಹಲವು ಬಾರಿ ಸ್ಪ್ಯಾನರ್‌ನಿಂದ ದಾಳಿ ಮಾಡಿದ್ದು, ಆಕೆ ಅಲ್ಲೇ ಜೀವ ಬಿಟ್ಟಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಇವರ ಪ್ರೇಮ ಸಂಬಂಧ ಇತ್ತೀಚೆಗೆ ಮುರಿದು ಹೋಗಿತ್ತು. ಇದೇ ಕೊಲೆಗೆ ಕಾರಣ ಎಂದು ವರದಿಯಾಗಿದೆ.

ಆದರೆ ದುರಂತ ಎಂದರೆ ಘಟನೆ ನಡೆಯುವ ವೇಳೆ ಅಲ್ಲಿ ತುಂಬಾ ಜನ ಸೇರಿದ್ದರೂ ಯಾರೊಬ್ಬರೂ ಕೂಡ ಆಕೆಯ ನೆರವಿಗೆ ಧಾವಿಸಿಲ್ಲ. ಅನೇಕರು ಈ ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವುದರಲ್ಲೇ ಮಗ್ನರಾಗಿದ್ದರು. ರಸ್ತೆಯಲ್ಲಿ ಘಟನೆ ನಡೆಯುವ ವೇಳೆ ಹಲವು ವಾಹನಗಳು ಕೂಡ ಹಾದು ಹೋಗಿದ್ದರೂ ಯಾರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ರಕ್ಷಣೆಗೆ ಧಾವಿಸಿ ಬಂದಿರಲಿಲ್ಲ.

Join Whatsapp
Exit mobile version