ಉತ್ತರಪ್ರದೇಶದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿದ್ದ 10 ಮಂದಿ ಮಹಿಳಾ ಹೋರಾಟಗಾರ್ತಿಯರಿಗೆ ಉತ್ತರ ಪ್ರದೇಶದ ಪೊಲೀಸರಿಂದ ನೊಟೀಸ್ ಜಾರಿಗೊಳಿಸಿದೆ. ಅತ್ಯಾಚಾರ ಮತ್ತು ಕೊಲೆ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಹತ್ತು ಮಹಿಳಾ ಹೋರಾಟಗಾರ್ತಿಯರು ನೋಟೀಸ್ ಪಡೆದಿದ್ದಾರೆ. ನೋಟಿಸ್ ಪಡೆದ ಹೋರಾಟಗಾರ್ತಿಯರಲ್ಲಿ ರಾಣಾ ಮಧುಗರ್ಗ್ ,ಮೀನಾ ಸಿಂಗ್ ,ಉಝ್ಮಾ ಪರ್ವೀನ್ ,ಸುಮಯ್ಯಾ ಮುಂತಾದವರೂ ಇದ್ದಾರೆ. ಇವರು 2019ರ ಲಕ್ನೋ ಸಿಎಎ ವಿರೋಧಿ ಹೋರಾಟದಲ್ಲೂ ಕೂಡಾ ಭಾಗಿಯಾಗಿ ಕರಾಲ ಕಾನೂನಿನ ವಿರುದ್ಧ ಪ್ರತಿಭಟಿಸಿದ್ದರು.
ಪೊಲೀಸ್ ಹೊರಡಿಸಿದ ಸಮನ್ಸ್ ನಲ್ಲಿ ನಮ್ಮ ವಿರುದ್ಧ ಸೆಕ್ಷನ್ 188,145,353 ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದಿದ್ದಾರೆ. ವಾಸ್ತವವಾಗಿ ಪೊಲೀಸರೇ ನಮಗೆ ಕಿರುಕುಳ ನೀಡಿ ರಸ್ತೆಯಲ್ಲೆಲ್ಲಾ ಎಳೆದಾಡಿಕೊಂಡು ಹೋಗಿದ್ದಾರೆ .ಆ ದೃಶ್ಯಗಳು ವೈರಲ್ ಕೂಡ ಆಗಿದೆ. ಆದರೆ ಅತ್ಯಾಚಾರ ,ಕೊಲೆ ಪ್ರಕರಣದ ವಿರುದ್ಧ ಹೋರಾಡಿದ ನಮ್ಮ ಮೇಲೆಯೇ ಸಮನ್ಸ್ ಜಾರಿಯಾದದ್ದು ಸಂವಿಧಾನದ ಮೇಲಿನ ನಂಬಿಕೆಯನ್ನು ಇಲ್ಲವಾಗಿಸುತ್ತದೆ ಎಂದು ಹಿರಿಯಾ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ವಿಮೆನ್ ಅಸೋಸಿಯೇಶನ್ ನ ಹಿರಿಯ ಸದಸ್ಯೆ ಮಧುಗರ್ಗ್ ಟೀಕಿಸಿದ್ದಾರೆ.