Home ಕರಾವಳಿ ಪುತ್ತೂರು | ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ: ಆರೋಪಿ ಕೃಷ್ಣ ರಾವ್‌ ಕೊನೆಗೂ ಬಂಧನ

ಪುತ್ತೂರು | ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ: ಆರೋಪಿ ಕೃಷ್ಣ ರಾವ್‌ ಕೊನೆಗೂ ಬಂಧನ

0

ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರ ಕೃಷ್ಣ ರಾವ್ ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಅತ್ಯಾಚಾರ, ವಂಚನೆ ಆರೋಪ ಕೇಳಿಬಂದಿತ್ತು. ಯುವತಿ ಗರ್ಭಿಣಿ ಆಗುತ್ತಿದ್ದಂತೆ ಆತ ಆಕೆಯನ್ನು ಮದುವೆಯಾಗಲು ನಿರಾಕರಿಸಿ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿ ಗರ್ಭಿಣಿಯಾಗಿರುವುದು ಗೊತ್ತಾಗುತ್ತಿದ್ದಂತೆಯೇ ಕೈಕೊಟ್ಟಿದ್ದ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎನ್ನುವವರ ಪುತ್ರ ಕೃಷ್ಣ ರಾವ್‌ನನ್ನು ಇದೀಗ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಗರ್ಭಿಣಿಯಾದ ಬಳಿಕ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆತ ಕೈಕೊಟ್ಟಿದ್ದರಿಂದ ಕಂಗಾಲಾದ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಆತ ಬಂಧನದ ಭಯದಿಂದ ಎಸ್ಕೇಪ್ ಆಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ಆರೋಪಿ ಕೃಷ್ಣ ಜೆ ರಾವ್ ಎಂಬಾತನನ್ನು ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದು, ನಿನ್ನೆ ರಾತ್ರಿಯೇ ಪುತ್ತೂರಿಗೆ ಕರೆತಂದಿರುವ ಪೋಲೀಸರು ಇಂದು ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಕಳೆದ 10 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಬೇಕೆಂದು ಎಸ್ ಡಿಪಿಐ ಪ್ರತಿಭಟನೆ ಮಾಡಿತ್ತು. ಕಾಂಗ್ರೆಸ್ ನಾಯಕರು ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version