Home Uncategorized ನಾಪೋಕ್ಲು | ಪಿಯು ಕಾಲೇಜು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ನಾಪೋಕ್ಲು | ಪಿಯು ಕಾಲೇಜು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಮಡಿಕೇರಿ: ನಾಪೋಕ್ಲು ಸಮೀಪದ ಹೊದನಾಡ ರಾಫೇಲ್ಸ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಕಾಲೇಜು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಎಫ್ ಎಮ್ ಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪುಪ್ಪಾ ಕುಟ್ಟಣ ಚಾಲನೆ ನೀಡಿದರು.


ನಂತರ ಮಾತನಾಡಿದ ಪುಪ್ಪಾ ಕುಟ್ಟಣ, ಮಕ್ಕಳು ಬರಿ ಕ್ರೀಡೆಯಲ್ಲಿ ಮಾತ್ರ ತೊಡಗಿಸಿಕೊಂಡರೆ ಸಾಲದು ಬದಲಾಗಿ ಓದಿನಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಪ್ರತಿ ನಿತ್ಯ ವ್ಯಾಯಾಮ ಮಾಡಿ ಸೋಮಾರಿತವನ್ನು ದೂರ ಮಾಡಬೇಕು. ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಛಲ ಬಿಡದೆ ವ್ಯಕ್ತಿತ್ವ ವಿಕಸನವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.


ಸ್ಪರ್ಧಿಗಳಿಗೆ ವಕೀಲ ಅಬ್ದುಲ್ಲಾ ಹಾಗೂ ಕಾಲೇಜಿನ ಟ್ರಸ್ಟಿ ಮೆಹಬೂಬ್ ಸಾಬ್ ಶುಭ ಹಾರೈಸಿದರು.

Join Whatsapp
Exit mobile version