Home ಟಾಪ್ ಸುದ್ದಿಗಳು ನ್ಯಾಷನಲ್ ಜಿಯೋಗ್ರಫಿಕ್ ನ ‘ಹಸಿರುಗಣ್ಣಿನ ಬಾಲಕಿ’ ಇಟಲಿಯಲ್ಲಿ ವಾಸ!

ನ್ಯಾಷನಲ್ ಜಿಯೋಗ್ರಫಿಕ್ ನ ‘ಹಸಿರುಗಣ್ಣಿನ ಬಾಲಕಿ’ ಇಟಲಿಯಲ್ಲಿ ವಾಸ!

ರೋಮ್: ನ್ಯಾಷನಲ್ ಜಿಯೋಗ್ರಫಿಕ್ ಮ್ಯಾಗಝೀನ್ ನ ಮುಖಪುಟ ಚಿತ್ರದಲ್ಲಿ ಸ್ಥಾನ ಪಡೆದು ಸುದ್ದಿಯಾಗಿದ್ದ ಆಫ್ಘನ್ ನಿರಾಶ್ರಿತೆ ಶರ್ಬತ್ ಗುಲಾ ಇಟಲಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ ಎಂದು ವರದಿಯಾಗಿದೆ.


ಇಟಲಿ ಸರ್ಕಾರ ಇದನ್ನು ದೃಢಪಡಿಸಿದೆ. ಅಫ್ಘಾನಿಸ್ತಾನದ ಪ್ರಜೆಯಾದ ಶರ್ಬತ್ ಗುಲಾ ರೋಮ್ ನಲ್ಲಿದ್ದಾಳೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ, ಹಲವಾರು ಸಂಘಟನೆಗಳು ಅವಳನ್ನು ದೇಶದಿಂದ ರಕ್ಷಿಸಲು ಇಟಲಿಗೆ ಮನವಿ ಮಾಡಿತ್ತು.

1984 ರಲ್ಲಿ ಅಮೇರಿಕನ್ ಫೋಟೊ ಜರ್ನಲಿಸ್ಟ್ ಸ್ಟೀವ್ ಮೆಕರಿ ಪಾಕಿಸ್ತಾನದ ನಿರಾಶ್ರಿತರ ಶಿಬಿರವೊಂದರಲ್ಲಿ ಶರ್ಬತ್ ಗುಲಾ ಛಾಯಾಚಿತ್ರವನ್ನು ಕ್ಲಿಕ್ಕಿಸಿದ್ದರು.


ಈ ಚಿತ್ತವು 1985 ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝೀನ್ ನ ಮುಖಪುಟದಲ್ಲಿ ಸ್ಥಾನ ಪಡೆದಾಗ ಶರ್ಬತ್ ಗುಲಾ ಜಗತ್ತಿನಾದ್ಯಂತ ಸುದ್ದಿಯಾಗಿದ್ದಳು. ಕಣ್ಣಿನ ಬಣ್ಣ ಮತ್ತು ಅವಳ ನೋಟದ ವಿಶಿಷ್ಟತೆಯಿಂದಾಗಿ ಫೋಟೋ ಗಮನಾರ್ಹವಾಗಿತ್ತು. ಫೋಟೋ ತೆಗೆದಾಗ ಗುಲಾ ಗೆ 12 ವರ್ಷ ವಯಸ್ಸಾಗಿತ್ತು. ಇಂದು ಆಕೆಗೆ 49 ವರ್ಷ.

Join Whatsapp
Exit mobile version