Home Uncategorized ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ’: WIM ನಿಂದ ಬಂಟ್ವಾಳದಲ್ಲಿ ಭಿತ್ತಿಪತ್ರ ಅಂಟಿಸುವ ಕಾರ್ಯಕ್ರಮ

ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ’: WIM ನಿಂದ ಬಂಟ್ವಾಳದಲ್ಲಿ ಭಿತ್ತಿಪತ್ರ ಅಂಟಿಸುವ ಕಾರ್ಯಕ್ರಮ

0
This image has an empty alt attribute; its file name is image-19-1024x630.png

ಬಂಟ್ವಾಳ: ‘ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ‘ ಘೋಷ ವಾಕ್ಯದಡಿ ಅಕ್ಟೋಬರ್ 2 ರಿಂದ ಡಿಸೆಂಬರ್ 3 ವರೆಗೆ  ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ.

ಇದರ ಭಾಗವಾಗಿರುವ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳ ವಿತರಣೆ  ಹಾಗೂ ಭಿತ್ತಿಪತ್ರಗಳ ಅಂಟಿಸುವ ಕಾರ್ಯಕ್ರಮ ವಿಮೆನ್ ಇಂಡಿಯಾ ಮೂವ್ಮೆಂಟ್ ಬಂಟ್ವಾಳ ಅಸೆಂಬ್ಲಿ  ವತಿಯಿಂದ  ಕಲ್ಲಡ್ಕ,ಬಿ.ಸಿ.ರೋಡ್ ಹಾಗೂ ಪಾಣೆಮಂಗಳೂರಿನಲ್ಲಿ  ನಡೆಯಿತು.

ಸಾರ್ವಜನಿಕರು ,ಶಾಲಾ ಕಾಲೇಜು  ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳನ್ನು ಭೇಟಿಯಾಗಿ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು.

ವಿಮ್ ಜಿಲ್ಲಾ ಉಪಾಧ್ಯಕ್ಷೆ ಝಹನಾ, ಬಂಟ್ವಾಳ ಅಸೆಂಬ್ಲಿ ಅಧ್ಯಕ್ಷೆ ಫಾತಿಮಾ ನುಸೈಬಾ, ಕಾರ್ಯದರ್ಶಿ ಝುಬೈದಾ, ಕಾರ್ಯಕರ್ತೆಯರಾದ ಸುಮಯ್ಯ, ಸಂಶಾದ್,ದುಲೈಕಾ, ರುಫೈದಾ ಝೀನತ್ ಹಾಗೂ ಹಬೀಬ ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version