Home Uncategorized ಮಡಿಕೇರಿ | ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಕುಟುಂಬದ ಪಾತ್ರ ಕುರಿತು ಕಾರ್ಯಾಗಾರ

ಮಡಿಕೇರಿ | ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಕುಟುಂಬದ ಪಾತ್ರ ಕುರಿತು ಕಾರ್ಯಾಗಾರ

ಮಡಿಕೇರಿ: ಮಡಿಕೇರಿ “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮಕ್ಕೆ ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಆರ್ ಸಿಹೆಚ್ ಅಧಿಕಾರಿಗಳು, ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಹಾಗೂ ಮುಖ್ಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.


ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಯೋಸೈಡ್ ಇನ್ನೋವೇಷನ್ (ನೂರಾ ಹೆಲ್ತ್ ಇಂಡಿಯಾ) ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವನ್ನು ‘ಯೋಸೈಡ್ ಇನ್ನೋವೇಷನ್’ ಸಂಸ್ಥೆಯೊಂದಿಗಿನ ಒಡಂಬಡಿಕೆಯ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಸದ್ಯ, “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಬೆಳವಣಿಗೆ ಕಾಣುತ್ತಿದೆ.

“ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವು ತಾಯಿ-ಮಗುವಿನ ಹಾಗೂ ಅವರ ಪಾಲನೆದಾರರಾದ ಕುಟುಂಬ ಸದಸ್ಯರಿಗೆ ಪ್ರಸವ ಪೂರ್ವ, ಪ್ರಸವ ನಂತರದ ಆರೈಕೆ ಮತ್ತು ಸುರಕ್ಷಿತ ಮಾತೃತ್ವ ಒದಗಿಸುವಲ್ಲಿ ಕುಟುಂಬದ ಪಾತ್ರದ ಬಗ್ಗೆ ಶಿಸ್ತುಬದ್ಧ ಮತ್ತು ಪರಿಣಾಮಕಾರಿಯಾದ ಆರೋಗ್ಯ ಶಿಕ್ಷಣ ನೀಡುವ ಗುರಿ ಹೊಂದಿದೆ.

Join Whatsapp
Exit mobile version