Home Uncategorized ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

0

ತುಮಕೂರು: ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್‍ನನ್ನು ಮಧುಗಿರಿಯ ಜೆಎಂಎಫ್‍ಸಿ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣ ಸಂಬಂಧ ಡ್ರೊಣ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಮಿಡಿಗೇಶಿ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಫೋಟ ನಡೆಸಿದ್ದ ಸ್ಥಳ ಮಹಜರು ನಡೆಸಿದ್ದಾರೆ.

ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದ. ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version