Home ಟಾಪ್ ಸುದ್ದಿಗಳು ಪಿಎಂ ಕೇರ್ ನಿಧಿ ಭಾರತ ಸರಕಾರದ್ದಲ್ಲ: ಹೈಕೋರ್ಟಿಗೆ ಪ್ರಧಾನಿ ಕಚೇರಿ ಹೇಳಿಕೆ

ಪಿಎಂ ಕೇರ್ ನಿಧಿ ಭಾರತ ಸರಕಾರದ್ದಲ್ಲ: ಹೈಕೋರ್ಟಿಗೆ ಪ್ರಧಾನಿ ಕಚೇರಿ ಹೇಳಿಕೆ

ನವದೆಹಲಿ: “ಪಿಎಂ ಕೇರ್ ಫಂಡ್ ಭಾರತ ಸರಕಾರಕ್ಕೆ ಸೇರಿದ್ದಲ್ಲ, ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ “ಸಾರ್ವಜನಿಕ ಪ್ರಾಧಿಕಾರ” ವಾಗಿಯೂ ರೂಪುಗೊಳ್ಳುವುದಿಲ್ಲ ಎಂದು ಪ್ರಧಾನಿ ಕಚೇರಿ ಹೈಕೋರ್ಟ್’ಗೆ ಹೇಳಿಕೆ ನೀಡಿದೆ.


ಪಿಎಂ ಕೇರ್ಸ್ ನಿಧಿಯನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ ಮತ್ತು ಅದನ್ನು ಭಾರತದ ಸಂವಿಧಾನ ಅಥವಾ ಸಂಸತ್ತು ಅಥವಾ ಯಾವುದೇ ರಾಜ್ಯ ಶಾಸಕಾಂಗದಿಂದ ರಚಿಸಲಾಗಿಲ್ಲ ಎಂದು ಪಿಎಂಒ ಅಧೀನ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್’ನಲ್ಲಿ ತಿಳಿಸಲಾಗಿದೆ.


ಸರಕಾರದ ನಿಧಿ ಇಲ್ಲವೇ ನೆರವಿನಲ್ಲಿ ಪಿಎಂ ಕೇರ್ ಇಲ್ಲ. ಅದರ ಮೇಲೆ ಹಾಗಾಗಿ ಸರಕಾರದ ಯಾವ ಹಿಡಿತವೂ ಇಲ್ಲ ಎಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದವಿಟ್’ನಲ್ಲಿ ಹೇಳಲಾಗಿದೆ.

ಪಿಎಂ ಕೇರ್ಸ್ ವ್ಯಕ್ತಿಗತ ಮತ್ತು ಸಂಸ್ಥೆಗಳ ದೇಣಿಗೆಗಳನ್ನು ಪಡೆಯುತ್ತದೆ ಮತ್ತು ಚಾರಿಟಿಗೆ ಹಂಚುತ್ತದೆ. ಲೆಕ್ಕಪತ್ರ ಇಟ್ಟಿದೆ. 1961ರ ಆದಾಯ ತೆರಿಗೆ ಕಾಯ್ದೆಯಂತೆ ಪಿಎಂ ಕೇರ್ ಫಂಡ್ ತೆರಿಗೆ ವಿನಾಯತಿ ಪಡೆದಿದೆ ಎಂದೂ ಹೇಳಲಾಗಿದೆ.

Join Whatsapp
Exit mobile version