Home ಟಾಪ್ ಸುದ್ದಿಗಳು ಹತ್ಯೆಯಾದ ಅಂಜಲಿ ನಿವಾಸಕ್ಕೆ ಸಂತೋಷ್ ಲಾಡ್ ಭೇಟಿ: 2 ಲಕ್ಷ ರೂ. ಆರ್ಥಿಕ ನೆರವು

ಹತ್ಯೆಯಾದ ಅಂಜಲಿ ನಿವಾಸಕ್ಕೆ ಸಂತೋಷ್ ಲಾಡ್ ಭೇಟಿ: 2 ಲಕ್ಷ ರೂ. ಆರ್ಥಿಕ ನೆರವು

ಹುಬ್ಬಳ್ಳಿ: ಇತ್ತೀಚಿಗೆ ಭೀಕರವಾಗಿ ಹತ್ಯೆಯಾದ ಯುವತಿ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂತೋಷ್ ಲಾಡ್ ಫೌಂಡೇಷನ್ ನಿಂದ ರೂ. 2 ಲಕ್ಷ ಚೆಕ್ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳೆದ ಮಗಳನ್ನು ಕಳೆದುಕೊಂಡ ಅವರ ನೋವು ಕಂಡು ನಿಜಕ್ಕೂ ಬೇಸರವಾಯಿತು. ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದೇನೆ. ಅಂಜಲಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದರು.

Join Whatsapp
Exit mobile version