ಮಂಜೇಶ್ವರಂ: ಗಾಝಾದಲ್ಲಿ ಆಸ್ಪತ್ರೆಯನ್ನು ಗುರಿಯಾಗಿಸಿ 500 ಕ್ಕೂ ಮಿಕ್ಕ ರೋಗಿಗಳು ಮತ್ತು ವೈದ್ಯರನ್ನು ಕೊಂದಿರುವ ಹೇಯ ಕೃತ್ಯವು ಝಿಯೋನಿಸ್ಟ್‌ಗಳ ತೀವ್ರ ಕ್ರೌರ್ಯದ ಅನಾವರಣವಾಗಿದೆ. ಪ್ಯಾಲೆಸ್ತೀನ್ ಜನತೆಯ ಮೇಲಿನ ದೌರ್ಜನ್ಯವನ್ನು ಇಸ್ರೇಲ್ ಕೊನೆಗೊಳಿಸಿಣಿಸಿ, ಪ್ಯಾಲೆಸ್ತೀನನ್ನು ಸ್ವತಂತ್ರ ದೇಶವನ್ನಾಗಿ ಘೋಷಿಸಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಆಗ್ರಹಿಸಿದ್ದಾರೆ.
ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿಯು ಉಪ್ಪಳದಲ್ಲಿ ಆಯೋಜಿಸಿದ್ದ ನೈಟ್ ವಿಜಿಲ್ ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ರೇಲ್ ಪ್ಯಾಲೆಸ್ತೀನನ್ನು ರಕ್ತಮಯವಾಗಿಸಿದೆ. ಅವರ ಮೂಲಭೂತ ಸೌಕರ್ಯಗಳನ್ನೂ ನಿರಾಕರಿಸಿ, ಒತ್ತೆಯಾಳಾಗಿ ಇಟ್ಟಿರುವ ದೃಶ್ಯವನ್ನು ನಾವು ನೋಡುತ್ತಿದ್ದೇವೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ.
ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸವಾದ್ ಸಿಎ ಮಾತನಾಡಿ, ಯುದ್ಧ ನಿಯಮಗಳನ್ನು ಗಾಳಿಗೆ ತೂರಿ, ಅಟ್ಟಹಾಸ ಮೆರೆಯುತ್ತಿರುವ ಝಿಯೋನಿಸ್ಟ್ ಭಯೋತ್ಪಾದನೆ ಕೊನೆಗೊಳ್ಳಬೇಕೆಂದು ಆಗ್ರಹಿಸಿದರು .
ಮಂಡಲಾಧ್ಯಕ್ಷರಾದ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿ, ಮಂಜೇಶ್ವರಂ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಹೊಸಂಗಡಿ ಪ್ಯಾಲೆಸ್ತೀನ್‌ಗೆ ಬೆಂಬಲ ಘೋಷಿಸಿ ಮಾತನಾಡಿದರು. ಕ್ಷೇತ್ರದ ಕಾರ್ಯದರ್ಶಿ ಶರೀಫ್ ಪಾವೂರು ಸ್ವಾಗತಿಸಿ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಇಂತಿಯಾಝ್ ಉಪ್ಪಳ ವಂದಿಸಿದರು.