Home ಟಾಪ್ ಸುದ್ದಿಗಳು ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣ, 13 ಮಂದಿ ಸಾವು

ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣ, 13 ಮಂದಿ ಸಾವು

ಹೊಸದಿಲ್ಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,786 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 13 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 26,509 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


ಇದೀಗ ಸೋಂಕಿತರ ಸಂಖ್ಯೆ 4,46,21,319 ಕ್ಕೆ ಏರಿಕೆಯಾಗಿದ್ದು, ಈ ಪೈಕಿ 5,28,847 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಇದುವರೆಗೆ 4,40,65,963 ಮಂದಿ ಗುಣಮುಖರಾಗಿದ್ದಾರೆ.

ಕೇರಳದಲ್ಲಿ 4,916, ತಮಿಳುನಾಡಿನಲ್ಲಿ 4,346, ಕರ್ನಾಟಕದಲ್ಲಿ 2,848, ಮಹಾರಾಷ್ಟ್ರದಲ್ಲಿ 2,455, ಪಶ್ಚಿಮ ಬಂಗಾಳದಲ್ಲಿ 1,580 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

Join Whatsapp
Exit mobile version