ಉಡುಪಿ: ಎನ್ ಕೌಂಟರ್ ಆಗಿದೆ, ಜೀವವೂ ಹೋಗಿದೆ. ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ. ಅವರಿಗೆ ಕೊಡೋ ಪರಿಹಾರ ನಮಗೂ ಕೊಡಿ ಎಂದು ಮೃತ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಕ್ಸಲ್ ಶರಣಾಗತಿ ವಿಚಾರ ಚರ್ಚೆಯಲ್ಲಿರುವ ಸಂದರ್ಭ ಇತ್ತೀಚೆಗೆ ಎನ್ ಕೌಂಟರ್ಗೆ ಬಲಿಯಾದ ನಕ್ಸಲ್ ಕಾರ್ಯಕರ್ತ ವಿಕ್ರಂ ಗೌಡ ಸಹೋದರಿ ಪ್ರತಿಕ್ರಿಯೆ ನೀಡಿದ್ದಾರೆ.
ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದ್ರೂ ನೀಡಿ ಅಂತ ಮನವಿ ಮಾಡಿದ್ದಾರೆ.
ನಾವು ಕಷ್ಟದಲ್ಲಿದ್ದೇವೆ, ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೂ ನಮ್ಮ ದಿನ ಸಾಗೋದಿಲ್ಲ. ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ, ಎನ್ ಕೌಂಟರ್ ಆಗಿದೆ ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡೋ ಪರಿಹಾರವನ್ನ ನಮಗೂ ಕೊಟ್ರೆ ಸಾಕು, ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಕೋರಿದ್ದಾರೆ.