Home ಕ್ರೀಡೆ ಭಾರತ ಮಹಿಳಾ ಏಕದಿನ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ

ಭಾರತ ಮಹಿಳಾ ಏಕದಿನ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ

0

ಒಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ಪುರುಷರ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿರುವಾಗಲೇ, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ನಾಯಕಿಯ ಬದಲಾವಣೆ ನಡೆದಿದೆ.

ಭಾರತ ಮಹಿಳಾ ತಂಡ ಇದೇ ಜನವರಿ 10 ರಿಂದ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಈ ಸರಣಿಗೆ ಇದೀಗ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕತ್ವವನ್ನು ಹರ್ಮನ್‌ ಪ್ರೀತ್ ಕೌರ್ ಬದಲಿಗೆ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ ವಹಿಸಲಾಗಿದೆ.

ವಾಸ್ತವವಾಗಿ ತಂಡದ ನಿಯಮಿತ ನಾಯಕಿ ಹರ್ಮನ್​ ಪ್ರೀತ್ ಕೌರ್​ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ತಂಡ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ನೀಡಲಾಗಿದೆ. ಉಪನಾಯಕತ್ವದ ಜವಬ್ದಾರಿವನ್ನು ಆಲ್ ​ರೌಂಡರ್ ದೀಪ್ತಿ ಶರ್ಮಾ ಅವರಿಗೆ ವಹಿಸಲಾಗಿದೆ. ಈ ಸರಣಿಯಿಂದ ಹರ್ಮನ್ ​ಪ್ರೀತ್​ ಮಾತ್ರವಲ್ಲದೆ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version