ಮಂಡ್ಯ: ಸಂಸದೆ ಸುಮಲತಾ ಅವರ ಮನೆಗೆ ಖುದ್ದು ನಾನೇ ಹೋಗಿ ಚುನಾವಣೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದೆ. ಅದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ ಎನ್ನುವ ಮೂಲಕ ಸುಮಲತಾ ಸುಳ್ಳು ಹೇಳುತ್ತಿದ್ದಾರೆ ಎಂದು ಮಂಡ್ಯ ಎನ್‌ಡಿಎ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ , ಜೆಡಿಎಸ್‌ನವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ ಎಂಬ ಸುಮಲತಾ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ಅಂಬರೀಶ್ ಅಭಿಮಾನಿಗಳು ಒಳಗೊಂಡಂತೆ ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧ್ಯವಾದರೆ ಎರಡು ದಿನ ಪ್ರಚಾರಕ್ಕೆ ಬನ್ನಿ ಅಕ್ಕ ಎಂದಿದ್ದೆ. ನಾನು ಸುಮಲತಾ ಅವರನ್ನು ಕರೆದಾಗ ವಿಪಕ್ಷ ನಾಯಕ ಅಶೋಕ್ ಕೂಡ ಮಂಡ್ಯಕ್ಕೆ ಬಂದು ಪ್ರಚಾರ ಮಾಡಿ ಎಂದು ಆಹ್ವಾನಿಸಿದ್ದರೆಂದು ತಿಳಿಸಿದರು.
ಸುಮಲತಾ ಇಂದು ನನಗೆ ಮತ ಕೊಟ್ಟಿದ್ದು, ಗೊಂದಲಗಳಿಗೆ ಯಾರೂ ಪ್ರಚಾರ ಕೊಡುವುದು ಬೇಡ. ನಾನೇ ವಿನ್. ಯಾರು ಯಾರ ಬಗ್ಗೆಯೂ ಸಣ್ಣತನದಲ್ಲಿ ಮಾತನಾಡುವುದು ಬೇಡ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದರಿಂದ ರಾಜ್ಯದಲ್ಲಿ ಎನ್‌ಡಿಎ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.