ಮುಂಬೈ: ಚಿಕನ್ ಶವರ್ಮಾ ತಿಂದು 19 ವರ್ಷದ ಯುವಕ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಪ್ರತಿಮೇಶ್ ಭೋಕ್ಸೆ ಮೃತ ಯುವಕ. ಮುಂಬೈನ ಮಂಖುರ್ದ್ ಪ್ರದೇಶದಲ್ಲಿ ರಸ್ತೆ ಬದಿಯ ಅಂಗಡಿಯೊಂದರಿಂದ ಚಿಕನ್ ಶವರ್ಮಾ ಸೇವಿಸಿದ ಬಳಿಕ ಪ್ರತಿಮೇಶ್ ಮೃತಪಟ್ಟಿದ್ದಾನೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಪ್ರತಿಮೇಶ್ ಸಾವಿನ ಬೆನ್ನಲ್ಲೇ ಅಂಗಡಿ ನಡೆಸುತ್ತಿದ್ದ ಆನಂದ್ ಕಾಂಬಳೆ ಮತ್ತು ಮೊಹಮ್ಮದ್ ಅಹ್ಮದ್ ರೆಜಾ ಶೇಖ್ ಎಂಬ ಇಬ್ಬರು ಮಾರಾಟಗಾರರನ್ನು ಬಂಧಿಸಲಾಗಿದೆ. ಶವರ್ಮಾ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.