ಕೋಲ್ಕತ್ತಾ: ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಗುರಿ ನೀಡಿದ್ದರೂ ಭರ್ಜರಿ ಆಟವಾಡಿದ ಪಂಜಾಬ್ ಕಿಂಗ್ಸ್ 8 ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕ 261 ರನ್ ಕಲೆಹಾಕಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಕಿಂಗ್ಸ್, ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿ ವಿಜಯದ ನಗೆ ನಕ್ಕಿತು.
ಜಾನಿ ಬೆಸ್ಟೊ ಅಮೋಘ ಶತಕ (48 ಎಸೆತಗಳಲ್ಲಿ ಅಜೇಯ 108 ರನ್) ಸಿಡಿಸಿದರೆ, ಪ್ರಭಸಿಮ್ರನ್ ಸಿಂಗ್ (54 ರನ್) ಹಾಗೂ ಶಶಾಂಕ್ ಸಿಂಗ್ (68 ರನ್) ಅರ್ಧಶತಕ ಸಿಡಿಸಿದರು.
ಕಿಂಗ್ಸ್ ಪಡೆ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬೆನ್ನಟ್ಟಿ ಗೆದ್ದ ತಂಡ ಎಂಬ ದಾಖಲೆಯನ್ನೂ ಬರೆಯಿತು. ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 2023ರಲ್ಲಿ 259 ರನ್ ಬೆನ್ನಟ್ಟಿ ಗೆದ್ದದ್ದು ಈ ವರೆಗೆ ದಾಖಲೆಯಾಗಿತ್ತು.