Home ಟಾಪ್ ಸುದ್ದಿಗಳು ನಡು ರಸ್ತೆಯಲ್ಲಿ ನಮಾಝ್ ಮಾಡಿದ ಮುಸ್ಲಿಮರು; ವಾಸ್ತವವೇನು…?

ನಡು ರಸ್ತೆಯಲ್ಲಿ ನಮಾಝ್ ಮಾಡಿದ ಮುಸ್ಲಿಮರು; ವಾಸ್ತವವೇನು…?

0

ಪ್ಯಾರಿಸ್: ನಗರದ ಮುಖ್ಯ ರಸ್ತೆಯಲ್ಲಿ ನಮಾಜ್ ಮಾಡುವ ಉದ್ದೇಶದಿಂದ ವಾಹನಗಳನ್ನು ತಡೆದ ಮುಸ್ಲಿಮರನ್ನು ಸಾರ್ವಜನಿಕನೊಬ್ಬ ರಸ್ತೆಬದಿಗೆ ಬಿಸಾಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಯ ಸತ್ಯಾಸತ್ಯತೆ ಬಯಲಾಗಿದೆ.


ಸುರಕ್ಷತಾ ಜಾಕೆಟ್ ಧರಿಸಿದ ಕೆಲವು ವ್ಯಕ್ತಿಗಳು ಪ್ಯಾರಿಸ್ ನಗರದ ರಸ್ತೆಯಲ್ಲಿ ಕೂತು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಹರಿದಾಡಿತ್ತು.


‘ನಡುರಸ್ತೆಯಲ್ಲಿ ನಮಾಜ್ ಮಾಡುವ ಉದ್ದೇಶದಿಂದ ವಾಹನಗಳನ್ನು ತಡೆದವರನ್ನು ಸಾರ್ವಜನಿಕರು ರಸ್ತೆಬದಿಗೆ ಎಳೆದು ಹಾಕಿದ್ದಾರೆ’ ಎಂಬ ಶೀರ್ಷಿಕೆ ನೀಡಿ ಸಂಘ ಪರಿವಾರದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.


ಮಧುಪೂರ್ಣಿಮಾ ಕಿಶ್ವಾರ್ ಎಂಬವರು ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ಸರ್ಕಾರಗಳು ಮತಬ್ಯಾಂಕ್ ಉದ್ದೇಶದಿಂದ ಹೇಡಿಗಳಂತೆ ನಡೆದುಕೊಳ್ಳುತ್ತಿವೆ ಎಂದು ಟ್ವೀಟ್ ಮಾಡಿದ್ದು, ಹಲವು ಜನರು ಈ ವೀಡಿಯೋವನ್ನು ಮರು ಟ್ವೀಟ್ ಮಾಡಿದ್ದಾರೆ.


ಫ್ಯಾಕ್ಟ್ ಚೆಕ್:
ರಸ್ತೆಯಲ್ಲಿ ನಮಾಝ್ ಮಾಡುವ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಲಾಯ್ತು ಎಂಬುವುದು ಸುಳ್ಳು ಎಂದು ಸ್ಪಷ್ಟವಾಗಿದೆ. ಈ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ‘ಸರ್ಕಾರದ ಪರಿಸರ ನೀತಿ ವಿರೋಧಿಸಿ ಕಳೆದ ನ.26ರಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು ಎಂದು ಪ್ಯಾರಿಸ್ ನ ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.

ಪತ್ರಕರ್ತ ಕ್ಲಮೆಟ್ ಲಾನೆಟ್ ಎಂಬವರು ವೀಡಿಯೋವನ್ನು ಟ್ವೀಟ್ ಮಾಡಿ, ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ‘ಎಕ್ಸ್ಪ್ರೆಸ್’ ವೆಬ್ಸೈಟ್ ಕೂಡಾ ಪರಿಸರ ಕಾರ್ಯಕರ್ತರ ಪ್ರತಿಭಟನೆಯನ್ನು ವರದಿ ಮಾಡಿದೆ. ಪರಿಸರ ಸಂಬಂಧಿ ಪ್ರತಿಭಟನೆಯನ್ನೇ ನಮಾಜ್ ಮಾಡುವ ಯತ್ನ ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದ್ದು ಸತ್ಯಾಸತ್ಯತೆ ತಿಳಿಯದ ಸಂಘ ಪರಿವಾರದ ಕಾರ್ಯಕರ್ತರು ಮುಸ್ಲಿಮರ ವಿರುದ್ಧ ತಮಗೆ ಬೇಕಾದಂತೆ ಶೀರ್ಷಿಕೆ ಬರೆದು ಈ ಪೋಸ್ಟನ್ನು ಹಂಚುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version