ಬೈಕ್‌‌ಗೆ ಅಡ್ಡ ಬಂದ ನವಿಲು: ಸವಾರ ಸಾವು

Prasthutha|

ಕೊಳ್ಳೇಗಾಲ: ಬೈಕ್‌ನಲ್ಲಿ ಹೋಗುತ್ತಿದ್ದಾಗ ನವಿಲು ಅಡ್ಡ ಬಂದ ಪರಿಣಾಮ ಬೈಕ್ ಸವಾರ ಮತ್ತು ನವಿಲು ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂತೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ನಡೆದಿದೆ.

- Advertisement -

ಸೂರಪೂರ ಗ್ರಾಮದ ನಿವಾಸಿ ರಾಜೂಗೌಡ ರವರ ಮಗ ರೇವಣ್ಣ(25) ಮೃತ ವ್ಯಕ್ತಿ. ಬೆಂಗಳೂರಿನಲ್ಲಿ ಏರ್‌ಟೆಲ್ ಕಂಪನಿಯಲ್ಲಿ ರೇವಣ್ಣ ಕೆಲಸ ಮಾಡುತ್ತಿದ್ದರು.

ರೇವಣ್ಣ ಗ್ರಾಮದಿಂದ ಕುಂತೂರು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗುತ್ತಿದ್ದ ವೇಳೆ ಬೈಕ್ ಗೆ ಅಡ್ಡಲಾಗಿ ನವಿಲು ನುಗ್ಗಿದೆ. ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದು ಸ್ಥಳದಲ್ಲೇಸಾವನ್ನಪ್ಪಿದ್ದಾನೆ. ನವಿಲು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version