Home ಟಾಪ್ ಸುದ್ದಿಗಳು ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು: ಸಾಮಾಜಿಕ ಮಾಧ್ಯಮ ‘ಕೂ ಆ್ಯಪ್’ ಸ್ಥಗಿತ

‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು: ಸಾಮಾಜಿಕ ಮಾಧ್ಯಮ ‘ಕೂ ಆ್ಯಪ್’ ಸ್ಥಗಿತ

ನವದೆಹಲಿ: ಟ್ವಿಟರ್’ಗೆ ಪರ್ಯಾಯ ಎಂದೇ ಹೇಳಲಾಗುತ್ತಿದ್ದ ಭಾರತದ ಸಾಮಾಜಿಕ ಮಾಧ್ಯಮ ಆಪ್ ‘ಕೂ’ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.


ಆನ್ಲೈನ್ ಮಾಧ್ಯಮ ಡೈಲಿಹಂಟ್ನೊಂದಿಗೆ ಸ್ವಾಧೀನ ಪ್ರಕ್ರಿಯೆ ಮಾತುಕತೆಗಳು ವಿಫಲವಾದ ನಂತರ 4 ವರ್ಷಗಳ ಹಿಂದೆ ಆರಂಭಗೊಂಡಿದ್ದ ‘ಕೂ’ ಆಪ್ ಸ್ಥಗಿತಕೊಳ್ಳುತ್ತಿದೆ.


ಕನ್ನಡಿಗ ರಾಧಾಕೃಷ್ಣ ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದ್ದ ‘ಕೂ’ ಎಂಬ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಇದೀಗ ಮುಚ್ಚಿಹೋಗಿದೆ.


ರಾಧಾಕೃಷ್ಣ ಇಂದು ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕೂ ಅನ್ನು ಮಾರುವ ಅವರ ಸತತ ಪ್ರಯತ್ನಗಳು ಫಲಕೊಡದೇ ಹೋದ್ದರಿಂದ ಅಂತಿಮವಾಗಿ ವಿದಾಯ ಹೇಳಲಾಗಿದೆ. ಸೋಷಿಯಲ್ ಮೀಡಿಯಾ ತಾಣವನ್ನು ನಿರ್ವಹಿಸಲು ಬಹಳವೇ ವೆಚ್ಚವಾಗುತ್ತದೆ. ಹೆಚ್ಚು ದಿನ ಇದನ್ನು ಮುಂದುವರಿಸಲು ಆಗುವುದಿಲ್ಲ ಎಂದು ಅಪ್ರಮೇಯ ರಾಧಾಕೃಷ್ಣ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ. ಇದರೊಂದಿಗೆ ಭಾರತದ ಏಕೈಕ ಸೋಷಿಯಲ್ ಮೀಡಿಯಾ ಆ್ಯಪ್ ಎಂಬ ಹೆಗ್ಗಳಿಕೆಯಲ್ಲಿದ್ದ ಕೂ ಧ್ವನಿ ನಿಂತಂತಾಗಿದೆ.

ಅಪ್ರಮೇಯ ರಾಧಾಕೃಷ್ಣ ಮತ್ತು ಮಯಂಕ್ ಬಿಡವಾಟ್ಕ ಎಂಬುವವರು 2020ರಲ್ಲಿ ಆರಂಭಿಸಿದ ಕೂ ಆ್ಯಪ್ ಅಂದಿನ ಟ್ವಿಟ್ಟರ್ಗೆ ಪರ್ಯಾಯವೆಂಬಂತೆ ಬಿಂಬಿತವಾಗಿತ್ತು. ಆರಂಭದಲ್ಲೇ ಬಹಳಷ್ಟು ಜನಪ್ರಿಯತೆ ಕೂಡ ಗಳಿಸಿತ್ತು. ಕೂ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ಆ್ಯಪ್ ಡೌನ್ಲೋಡ್ ಮಾಡಿದ್ದರು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇದು ಲಭ್ಯ ಇದ್ದರಿಂದ ಬಹಳ ನಿರೀಕ್ಷೆ ಇತ್ತು. ಆದರೆ, ಎಷ್ಟೇ ತಂತ್ರಜ್ಞಾನ ಬೆಂಬಲ ಇದ್ದರೂ ಸೋಷಿಯಲ್ ಮೀಡಿಯಾ ತಾಣವನ್ನು ಒಂದು ಹಂತಕ್ಕೆ ಕೊಂಡೊಯ್ಯಲು ಐದಾರು ವರ್ಷವಾದರೂ ಬೇಕಾಗುತ್ತದೆ. ಸ್ಥಾಪನೆಯಾದ ಎರಡು ವರ್ಷದಲ್ಲಿ ಲಾಭದ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಅಪ್ರಮೇಯ ಅವರು ಹೇಳಿದ್ದಾರೆ.

Join Whatsapp
Exit mobile version