Home ಮಾಹಿತಿ ಲಾಸ್‌ ಏಂಜಲೀಸ್ | ಭೀಕರ ಕಾಡ್ಗಿಚ್ಚು: 30 ಸಾವಿರ ಜನರ ಸ್ಥಳಾಂತರ

ಲಾಸ್‌ ಏಂಜಲೀಸ್ | ಭೀಕರ ಕಾಡ್ಗಿಚ್ಚು: 30 ಸಾವಿರ ಜನರ ಸ್ಥಳಾಂತರ

ಲಾಸ್‌ ಏಂಜಲೀಸ್‌: ಕ್ಯಾಲಿಪೋರ್ನಿಯಾದ ಲಾಸ್‌ ಏಜಂಲೀಸ್‌ ನ ಕಾಡಿನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಸಾವಿರಾರು ಮನೆಗಳು, ವಾಹನಗಳು ಸುಟ್ಟು ಕರಕಲಾಗಿವೆ.

ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಟಾ ಮೋನಿಕಾ ಬಳಿಯ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶವನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದ ಗಾಳಿ ತೀವ್ರವಾಗಿ ಬೀಸುತ್ತಿರುವ ಕಾರಣ ಬೆಂಕಿ ಎಲ್ಲೆಡೆ ಹರಡುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version