ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಾಗಾರ

Prasthutha|

ಮಡಿಕೇರಿ: ಮಕ್ಕಳ ದಿನಾಚರಣೆಯ ಅಂಗವಾಗಿ ಪಾನ್ ಇಂಡಿಯಾ ವತಿಯಿಂದ ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮನ್ನು ವಿರಾಜಪೇಟೆಯಲ್ಲಿ ಆಯೋಜಿಸಲಾಗಿತ್ತು. ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ, ಶಿಕ್ಷಣ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

- Advertisement -


ಪೊನ್ನಂಪೇಟೆ ನ್ಯಾಯಾಲಯ ವಕೀಲರಾದ ವಿದ್ಯಾ ಬಾಲ್ಯ ವಿವಾಹದ ಬಗ್ಗೆ ಮಾತನಾಡಿ, ನಮ್ಮ ನ್ಯಾಯಾಲಯ ಹಾಗೂ ಇಲಾಖೆಗಳಿಗೆ ಮಕ್ಕಳು ಯಾವುದೇ ಭಯವಿಲ್ಲದೆ ದೂರು ನೀಡಬಹುದು. ಕಡ್ಡಾಯ ಶಿಕ್ಷಣ, ಬದುಕುವ ಹಕ್ಕು, ಕೆಟ್ಟ ಅಭ್ಯಾಸಗಳನ್ನು ದೂರವಿಡಬೇಕು. ನಿಮ್ಮ ನೆರೆಹೊರೆ ಅಥವಾ ಎಲ್ಲಿಯಾದರೂ ಬಾಲ್ಯ ವಿವಾಹ ನಡೆದರೆ ಮುಕ್ತಾವಾಗಿ ತಿಳಿಸಬೇಕು. ಬಾಲ್ಯ ವಿವಾಹದಿಂದ ಜೀವನ ಹಾಳಾಗುತ್ತದೆ ಹಾಗೂ ವಿವಾಹದ ವಯಸ್ಸು ಹೆಣ್ಣಿಗೆ 18, ಗಂಡಿಗೆ 21, ಅಗಲೇ ಬೇಕೆಂದು ಹೇಳಿದರು.


ಪೊನ್ನಂಪೇಟೆ ತಾಲೂಕು ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಗಿರಿ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನಿನ ಬಗ್ಗೆ ಮಕ್ಕಳಿಗೆ ಜಾಗೃತಿಯನ್ನು ಮೂಡಿಸಿದರು. ಇನ್ನೂ ಪೊನ್ನಂಪೇಟೆ ನ್ಯಾಯಾಲಯದ ವಕೀಲರಾದ ದರ್ಶನ್ ಕುಮಾರ್ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನಿಡಿದರು.

Join Whatsapp
Exit mobile version