Home ಕ್ರೀಡೆ T-20 ಸರಣಿಯಿಂದ ಹಿಂದೆ ಸರಿದ ವಿಲಿಯಮ್ಸನ್: ಸೌಥಿಗೆ ಸಾರಥ್ಯ

T-20 ಸರಣಿಯಿಂದ ಹಿಂದೆ ಸರಿದ ವಿಲಿಯಮ್ಸನ್: ಸೌಥಿಗೆ ಸಾರಥ್ಯ

ಜೈಪುರ: ಬುಧವಾರದಿಂದ ಭಾರತದ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ T-20 ಸರಣಿಯಿಂದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಿಂದೆ ಸರದಿದ್ದಾರೆ.


ಕೇನ್ ವಿಲಿಯಮ್ಸನ್ ಬದಲು ಅನುಭವಿ ಬೌಲರ್ ಟಿಮ್ ಸೌಥಿ ತಂಡದ ಸಾರಥ್ಯ ವಹಿಸಲಿದ್ದಾರೆ.
“ಭಾರತ ವಿರುದ್ಧದ ಮೂರು ಪಂದ್ಯಗಳ T-20 ಸರಣಿಗೆ ಕೇನ್ ವಿಲಿಯಮ್ಸನ್ ಅಲಭ್ಯರಾಗಲಿದ್ದಾರೆ. ಸರಣಿಯ ಮೂರು ಪಂದ್ಯಗಳು ಬುಧವಾರ, ಶುಕ್ರವಾರ ಮತ್ತು ಭಾನುವಾರ ನಡೆಯಲಿದೆ. ಇದು ಅವರ ವೈಯಕ್ತಿಕ ನಿರ್ಧಾರವಾಗಿದೆ. T-20 ಸರಣಿ ಬಳಿಕ ನಡೆಯಲಿರುವ ಟೆಸ್ಟ್ ಸರಣಿ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ಮತ್ತೊಂದೆಡೆ ನ್ಯೂಜಿಲೆಂಡ್’ನ ವಿಕೆಟ್ ಕೀಪರ್- ಬ್ಯಾಟರ್ ಡೆವೊನ್ ಕಾನ್ವೆ T-20 ವಿಶ್ವಕಪ್ ಸೆಮಿಫೈನಲ್​ ಪಂದ್ಯದ ವೇಳೆ ಔಟಾದ ಹತಾಶೆಯಲ್ಲಿ ತಮ್ಮ ಬ್ಯಾಟ್​ಗೆ ಜೋರಾಗಿ ಗುದ್ದಿದ್ದರಿಂದ ಬಲಗೈ ಕಿರು ಬೆರಳಿನ ಮೂಳೆ ಮುರಿದಿತ್ತು. ಹೀಗಾಗಿ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ. ಭಾರತದ ವಿರುದ್ಧದ ಸರಣಿಯಿಂದಲೂ ಕಾನ್ವೆ ಹೊರಗುಳಿದಿದ್ದಾರೆ.


ಕಾನ್ವೆ ಬದಲಿಗೆ ಡೇರಿಲ್ ಮಿಚೆಲ್ ಕಿವೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೂರು ಪಂದ್ಯಗಳ T-20 ಸರಣಿಯ ಮೊದಲ ಪಂದ್ಯ ಬುಧವಾರ ರಾತ್ರಿ ಜೈಪುರದಲ್ಲಿ ನಡೆಯಲಿದೆ. ಎರಡನೇ ಪಂದ್ಯ ರಾಂಚಿಯಲ್ಲಿ ಶುಕ್ರವಾರ ಮತ್ತು ಅಂತಿಮ ಪಂದ್ಯ ಕೋಲ್ಕತ್ತದಲ್ಲಿ ಭಾನುವಾರ ನಡೆಯಲಿದೆ.

ತಂಡಗಳು
ನ್ಯೂಜಿಲೆಂಡ್ T-20 ತಂಡ:
ಟಿಮ್ ಸೌಥಿ (ನಾಯಕ),
ಟಾಡ್ ಆಸ್ಲೆ, ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚಲ್ ಸ್ಯಾಂಟ್ನರ್, ಟಿಮ್ ಸೇಫರ್ಟ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲೂಕಿ ಫರ್ಗೂಸನ್, ಅಡಮ್ ಮಿಲ್ನೆ, ಈಶ್ ಸೋಧಿ.

ಭಾರತ T-20 ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ [ WK], ರಿಷಭ್ ಪಂತ್ [WK], ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಆರ್ ಅಶ್ವಿನ್, ಯುಜವೇಂದ್ರ ಚಹಲ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್.

Join Whatsapp
Exit mobile version