ಶಿಬಾಜೆ ದಲಿತ ಯುವಕ‌ ಶ್ರೀಧರ ಹತ್ಯೆ| ಸಮಗ್ರ ಪೊಲೀಸ್ ತನಿಖೆಗೆ ಆನಂದ ಮಿತ್ತಬೈಲ್ ಒತ್ತಾಯ

Prasthutha|

ಬೆಳ್ತಂಗಡಿ: ಶಿಬಾಜೆ ದಲಿತ ಯುವಕ‌ ಶ್ರೀಧರ ಹತ್ಯೆಗೆ ಸಂಬಂಧಿಸಿದಂತೆ ಸಮಗ್ರ ಪೊಲೀಸ್ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಗೂ ದಲಿತ ಸಂಘಟನೆಯ ಮುಖಂಡರಾದ ಆನಂದ ಮಿತ್ತಬೈಲ್ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತು ಮನೆ ಎಂಬಲ್ಲಿರುವ ಎಸಿ.ಕುರಿಯನ್ ರವರಿಗೆ ಸೇರಿರುವ ತೋಟದಲ್ಲಿ ನಡೆದಿರುವ ಮೂಡಿಗೆರೆಯ ದಲಿತ ಯುವಕ‌ ಶ್ರೀಧರ ಅವರ ಹತ್ಯೆ ಅತ್ಯಂತ ಖಂಡನೀಯ. ಶಿಬಾಜೆ ಗುತ್ತು ಮನೆ ಎಂಬಲ್ಲಿ ತೋಟದ ಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ ಅವರು ಶನಿವಾರ ತನಕ ಕೆಲಸ ನಿರ್ವಹಿಸುತ್ತಿದ್ದರು , ಆದಿತ್ಯವಾರ ಶ್ರೀಧರ್ ಮೃತದೇಹ ನಗ್ನ ಸ್ಥಿತಿಯಲ್ಲಿ ತೋಟದಲ್ಲಿ ಪತ್ತೆಯಾದಾಗ ಮಾಲೀಕ ಎ ಸಿ ಕುರಿಯನ್ ಪೊಲೀಸರಿಗೆ ವಿಷಯ ತಿಳಿಸದೆ ಇನ್ನೋರ್ವ ಕಾರ್ಮಿಕನಿಂದ ಪೊಲೀಸರಿಗೆ ದೂರವಾಣಿ ಕರೆ ಮಾಡಿಸಿರುವುದು ಯಾತಕ್ಕಾಗಿ ಎಂಬ ಅನುಮಾನ ಮೂಡಿಸುತ್ತದೆ ಎಂದು ಹೇಳಿದ್ದಾರೆ.

 ಈ ಕೊಲೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ನಾಲ್ಕು ಮಂದಿ ಸಾರ್ವಜನಿಕವಾಗಿ ಮರಣಾಂತಿಕ ಹಲ್ಲೆ ನಡೆಸಿದ್ದು ತದನಂತರ ಈ ವಿಷಯವನ್ನು ಮಾಲೀಕನಿಗೆ ತಿಳಿಸಿದಾಗ ಅದರ ಬಗ್ಗೆ ಅಸಡ್ಡೆ ತೋರಿದ್ದರಿಂದ ರಾತ್ರಿ ಶ್ರೀಧರನನ್ನು ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿ ತೋಟದಲ್ಲಿ ಶವವನ್ನು ನಗ್ನ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆ. ದಲಿತ ಜೀವಗಳಿಗೆ ಈ ರಾಜ್ಯದಲ್ಲಿ ಬೆಲೆ ಇಲ್ಲದಾಗಿದೆ. ದಲಿತರ ಕೊಲೆ ನಡೆಸಿದ ಆರೋಪಿಗಳು ರಾಜಾ ರೋಷವಾಗಿ ಇದ್ದಾರೆ.  ಮತ್ತು ಈ ಕೊಲೆ ಪ್ರಕರಣ ಆರೋಪಿಗಳು ಕುರುಂಜ ಪರಿಸರದಲ್ಲಿ ದಲಿತ ಸಮುದಾಯದ ಯುವತಿ ಮತ್ತು ಮಹಿಳೆಯರ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತಮ್ಮ ಜೊತೆ ತೊಡಗುವಂತೆ ದಬ್ಬಾಳಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ತನಿಖೆಗೆ ವಿಶೇಷ ತಂಡವನ್ನು ರಚಿಸಿ ಈ ಕೊಲೆಯ ಹಿಂದಿನ ಕಾರಣವನ್ನು ಹೊರ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

ಪೊಲೀಸರು ರಾಜಕೀಯ ಪ್ರಭಾವಕ್ಕೆ‌‌ ಮಣಿಯದೆ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಮೃತ ಕಾರ್ಮಿಕ ಯುವಕನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಗರಿಷ್ಠ ಪರಿಹಾರ ನೀಡಬೇಕು ಎಂದು ಆನಂದ ಮಿತ್ತಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version