Home ಟಾಪ್ ಸುದ್ದಿಗಳು ಇಂಗ್ಲಿಷ್ ಕಲಿಯಿರಿ, ಹಿಂದಿ ಕೆಲಸಕ್ಕೆ ಬರುವುದಿಲ್ಲ: ರಾಹುಲ್ ಗಾಂಧಿ

ಇಂಗ್ಲಿಷ್ ಕಲಿಯಿರಿ, ಹಿಂದಿ ಕೆಲಸಕ್ಕೆ ಬರುವುದಿಲ್ಲ: ರಾಹುಲ್ ಗಾಂಧಿ

ರಾಜಸ್ತಾನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ರಾಜಸ್ತಾನ ತಲುಪಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು, ಹಿಂದಿ ಭಾಷೆ ಬಳಕೆ ಸಂಬಂಧ ಹೇಳಿಕೆ ನೀಡಿದ್ದು, ಜಗತ್ತಿನ ಇತರ ಭಾಗದ ಜನರೊಂದಿಗೆ ನೀವು ಮಾತನಾಡಬೇಕಿದ್ದರೆ ಕೇವಲ ಹಿಂದಿ ಗೊತ್ತಿದ್ದರೆ ಸಾಲದು, ಇಂಗ್ಲಿಷ್ ಕೂಡ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನ ಇತರ ಭಾಗಗಳ ಜನರೊಂದಿಗೆ ಮಾತನಾಡಬೇಕಿದ್ದರೆ ಹಿಂದಿ ಕೆಲಸಕ್ಕೆ ಬರುವುದಿಲ್ಲ, ಆಗ ಇಂಗ್ಲಿಷ್ ಬೇಕಾಗುತ್ತದೆ. ಹಾಗಾಗಿ, ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಓದಿ, ಅಮೆರಿಕನ್ನರೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅವರು ಅಮೆರಿಕ ಬಳಸುವ ಭಾಷೆಯನ್ನು ಬಳಸಿಕೊಂಡು ಅವರ ವಿರುದ್ಧವೇ ಗೆಲ್ಲಬೇಕು. ಇದಕ್ಕೆ ಪೂರಕವಾಗಿ ರಾಜಸ್ಥಾನದಲ್ಲಿ 1,700 ಇಂಗ್ಲಿಷ್ ಶಾಲೆಗಳನ್ನು ತೆರೆದಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಬೇಕಾಗಿಲ್ಲ. ಆದರೆ, ಬಿಜೆಪಿಯ ನಾಯಕರು ಮಾತ್ರ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಮ್ ಸ್ಕೂಲಿಗೆ ಕಳುಹಿಸುತ್ತಾರೆ. ವಾಸ್ತವದಲ್ಲಿ ಅವರಿಗೆ ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯುವುದು ಬೇಕಾಗಿಲ್ಲ. ಹಾಗಾಗಿ, ದೊಡ್ಡದಾಗಿ ಕನಸು ಕಾಣಿ ಎಂದು ಸಲಹೆ ನೀಡಿದರು.

Join Whatsapp
Exit mobile version