Home ಟಾಪ್ ಸುದ್ದಿಗಳು ಕಾಶ್ಮೀರ ನರಮೇಧ ಹಾಗೂ ಗೋ ಹೆಸರಿನಲ್ಲಿ ಮುಸ್ಲಿಮರ ಹತ್ಯೆ ಎರಡೂ ಒಂದೇ: ನಟಿ ಸಾಯಿ ಪಲ್ಲವಿ

ಕಾಶ್ಮೀರ ನರಮೇಧ ಹಾಗೂ ಗೋ ಹೆಸರಿನಲ್ಲಿ ಮುಸ್ಲಿಮರ ಹತ್ಯೆ ಎರಡೂ ಒಂದೇ: ನಟಿ ಸಾಯಿ ಪಲ್ಲವಿ

ನವದೆಹಲಿ: ಕಾಶ್ಮೀರ ನರಮೇಧ ಹಾಗೂ ಗೋ ಹೆಸರಿನಲ್ಲಿ ಮುಸ್ಲಿಮರ ಹತ್ಯೆ ಎರಡೂ ಸಮಾನ ಅಪರಾಧಗಳು ಎಂದು ಖ್ಯಾತ ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.


ಖಾಸಗಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಅವರ ಬಳಿ ರಾಜಕೀಯ ಒಲವುಗಳ ಬಗ್ಗೆ ಪಶ್ನೆಯನ್ನು ಕೇಳಲಾಯಿತು. ಈ ಕುರಿತು ಉತ್ತರ ನೀಡಿದ ಅವರು, ನಾನು ಸೈದ್ಧಾಂತಿಕವಾಗಿ ತಟಸ್ಥಳಾಗಿದ್ದೇನೆ. ಎಡಪಂಥೀಯರು ಅಥವಾ ಬಲಪಂಥೀಯ ಗುಂಪುಗಳು ಸರಿಯೇ ಎಂದು ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು.


ನಾನು ತಟಸ್ಥ ವಾತಾವರಣದಲ್ಲಿ ಬೆಳೆದಿದ್ದೇನೆ. ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಯಾರು ಸರಿ ಮತ್ತು ಯಾರು ತಪ್ಪು ಎಂದು ನಾನು ಹೇಳಲಾರೆ. ದಿ ಕಾಶ್ಮೀರ್ ಫೈಲ್ಸ್ ಎಂಬ ಚಲನಚಿತ್ರವು ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ, ಒಬ್ಬ ವ್ಯಕ್ತಿಯು ಮುಸ್ಲಿಂ ಎಂದು ಶಂಕಿಸಲಾದ ಕಾರಣ ಹಸುವನ್ನು ಸಾಗಿಸುತ್ತಿದ್ದಕ್ಕಾಗಿ ಅವನನ್ನು ಕೊಂದ ಘಟನೆಯೊಂದು ನಡೆಯಿತು. ವ್ಯಕ್ತಿಯನ್ನು ಕೊಂದ ನಂತರ, ದಾಳಿಕೋರರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು. ಕಾಶ್ಮೀರದಲ್ಲಿ ಏನಾಯಿತು ಮತ್ತು ಇತ್ತೀಚೆಗೆ ಏನಾಯಿತು ಎಂಬುದರ ನಡುವಿನ ವ್ಯತ್ಯಾಸ ಎಲ್ಲಿದೆ ಎಂದು ಪ್ರಶ್ನಿಸಿದರು.

Join Whatsapp
Exit mobile version