Home ಟಾಪ್ ಸುದ್ದಿಗಳು ಪೊಲೀಸರು ಶಾಸಕ ಹರೀಶ್ ಪೂಂಜರನ್ನು ಬಂಧಿಸಬೇಕಿತ್ತು: ಮಂಜುನಾಥ್ ಭಂಡಾರಿ

ಪೊಲೀಸರು ಶಾಸಕ ಹರೀಶ್ ಪೂಂಜರನ್ನು ಬಂಧಿಸಬೇಕಿತ್ತು: ಮಂಜುನಾಥ್ ಭಂಡಾರಿ

ಮಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಹರೀಶ್ ಪೂಂಜ ವಿಚಾರದಲ್ಲಿ ಪೊಲೀಸರು ಮೃದುಧೋರಣೆ ತೋರಿಸಬಾರದಿತ್ತು. ಅವತ್ತು ಪೊಲೀಸರು ಅವರನ್ನು ಬಂಧಿಸಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರೀಶ್ ಪೂಂಜಗೆ ಹೈಕೋರ್ಟ್ ಚಾಟಿ ಬೀಸಿದೆ. ಪೂಂಜ ಮಾಡಿದ್ದು ತಪ್ಪು ಎಂದು ಉಚ್ಛ ನ್ಯಾಯಾಲವೇ ಹೇಳಿದೆ ಎಂದು ಹೇಳಿದರು.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಪಕ್ಷದ ಪೂರ್ತಿ ಮಿಷನರಿ ಕೆಲಸ ಮಾಡಿದೆ. ಈ ಹಿಂದೆ ನಾವು ನಾಮಕವಾಸ್ತೆಗೆ ಚುನಾವಣೆ ಮಾಡಿದ್ದರಿಂದ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಿದ್ದರು.ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೂತ್ ಮಟ್ಟದಿಂದ ಕೆಲಸ ಮಾಡಿದೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಮತದಾರರ ಬಳಿ ಹೋಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶ್ರಮ ವಹಿಸಿದ್ದಾರೆ. ಪ್ರತಿ ಮತದಾರರನ್ನು ಸಂಪರ್ಕಿಸಿ ಮತಯಾಚನೆ ಮಾಡಲಾಗಿದೆ ಎಂದರು.

ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿ ದ.ಕ ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರ ನೋಂದಣಿ ಹೆಚ್ಚಾಗಿದೆ. ಮಹಿಳೆಯರು ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಹೀಗಾಗಿ ಮಹಿಳಾ ಮತದಾರರು ಹೆಚ್ಚಿರುವುದರಿಂದ ಕಾಂಗ್ರೆಸ್‌ ಗೆ ಗೆಲುವಿನ ವಿಶ್ವಾಸ ಹೆಚ್ಚಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಕೆಕೆ ಮಂಜುನಾಥ್ ಗೆಲ್ಲುವ ಅಚಲ ವಿಶ್ವಾಸ ಇದೆ. ಕಾಂಗ್ರೆಸ್ ಚುನಾವಣಾ ವೀಕ್ಷಕರ ಮಾಹಿತಿಯಂತೆ ನಾವು ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಅಧಿಕಾರದಲ್ಲಿ ಬಂದ ಕಡೆ ಹೊಸ ಪಿಂಚಣೆ ಯೋಜನೆ ರದ್ದಾಗಿ ಹಳೇ ಪಿಂಚಣಿ ಜಾರಿಯಾಗಿದೆ.7ನೇ ವೇತನ ಆಯೋಗದ ಜಾರಿಗೆ ಆಗ್ರಹ ಇದೆ, ಆ ಬೇಡಿಕೆಯನ್ನೂ ಕಾಂಗ್ರೆಸ್ ಸರ್ಕಾರ ಈಡೇರುತ್ತೆ ಎಂದರು.

ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಬಹುಮತದ ಅಗತ್ಯ ಇದೆ.  ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version