Home ಟಾಪ್ ಸುದ್ದಿಗಳು ಹಮಾಸ್ ಗುಂಪು ಮಕ್ಕಳನ್ನು ಬೋನಿನಲ್ಲಿ ಕೂಡಿ ಹಾಕಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದು ನಿಜವೇ?: ಫ್ಯಾಕ್ಟ್‌ಚೆಕ್ ರಿಸಲ್ಟ್ ಇಲ್ಲಿದೆ...

ಹಮಾಸ್ ಗುಂಪು ಮಕ್ಕಳನ್ನು ಬೋನಿನಲ್ಲಿ ಕೂಡಿ ಹಾಕಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದು ನಿಜವೇ?: ಫ್ಯಾಕ್ಟ್‌ಚೆಕ್ ರಿಸಲ್ಟ್ ಇಲ್ಲಿದೆ ನೋಡಿ

ಇಸ್ರೇಲ್ ಮತ್ತು ಪ್ಯಾಲಸ್ತೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗುತ್ತಿರುವ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಕಲವು ಸುಳ್ಳು ಮಾಹಿತಿಯ ವೀಡಿಯೋಗಳು ಹರಿದಾಡುತ್ತಿವೆ. ಟಿವಿ ಮಾಧ್ಯಮಗಳೂ ಸತ್ಯಾಸತ್ಯತೆ ತಿಳಿಯದೆ ಅವುಗಳನ್ನು ಹಾಗೇ ವೀಕ್ಷಕರಿಗೆ ತಲುಪಿಸುತ್ತಿದೆ. ಅಂತಹ ವೈರಲ್ ವಿಡಿಯೋವೊಂದಾಗಿದೆ,  ಪುಟ್ಟ ಪುಟ್ಟ ಮಕ್ಕಳನ್ನು ಒಂದು ಕೇಜ್‌ನಲ್ಲಿ ಕೂಡಿ ಹಾಕಿರುವ ದೃಶ್ಯ.

 

ಪ್ಯಾಲೇಸ್ತೀನ್‌ನಲ್ಲಿ ಹಮಾಸ್‌ನವರು ಪುಟ್ಟ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿದ್ದಾರೆ ಎಂಬ ಫೋಟೊ ಮತ್ತು ವಿಡಿಯೋಗಳು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ನಿಜವಾಗಿಯೂ ಹಮಾಸ್‌ ಗುಂಪು ಪುಟ್ಟ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿರುವುದು ನಿಜವೇ, ಇದರ ವಾಸ್ತವ ಏನು ಎಂಬುದನ್ನು ನೋಡೋಣ.

ಫ್ಯಾಕ್ಟ್‌ಚೆಕ್ :

ಈ ಪೋಟೊ ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲು ಗೂಗಲ್ ರವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪ್ಯಾಲೆಸ್ಟೈನ್ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಿಂದ ಜನವರಿ 2020ರಲ್ಲಿಯೇ ಈ ವಿಡಿಯೋ ಅಪ್ಲೋಡ್ ಆಗಿದ್ದು, ಆನಂತರ ಡಿಲೀಟ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

 

ಈ ದೃಶ್ಯಾವಳಿಯಲ್ಲಿ  ವಿಡಿಯೋ ಚಿತ್ರೀಕರಿಸುತ್ತಿರುವ ವ್ಯಕ್ತಿ ನಗುತ್ತಿರುವುದನ್ನು ನೀವು ಕೇಳಬಹುದು. “ಇದು ಹಳೆಯ ವಿಡಿಯೋ, ತನ್ನ ಮಕ್ಕಳು ಕೋಳಿ ಪಂಜರದಲ್ಲಿ ಆಟವಾಡುತ್ತಿರುವುದನ್ನು ಕಂಡ ತಂದೆ ತಮಾಷೆಗೆಂದು ಲಾಕ್ ಮಾಡಿ ವಿಡಿಯೋ ಮಾಡಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಒಂದಂತೂ ಸತ್ಯ, ಈ ವಿಡಿಯೋ ಇತ್ತೀಚಿನ ಇಸ್ರೇಲ್ – ಪ್ಯಾಲೇಸ್ತೀನ್ ವಿವಾದಕ್ಕೂ ಮೊದಲೇ ಅಪ್ಲೋಡ್ ಆಗಿದೆ. ಹಾಗಾಗಿ ಪ್ಯಾಲೇಸ್ತೀನ್‌ನಲ್ಲಿ ಮಕ್ಕಳನ್ನು ಪಂಜರದಲ್ಲಿ ಕೂಡಿ ಹಾಕಿ ಒತ್ತೆಯಾಳಾಗಿ ಇಟ್ಟಿದ್ದಾರೆ ಎಂಬ ಈ ಮಾಹಿತಿ ಸುಳ್ಳಾಗಿದೆ.

 

Join Whatsapp
Exit mobile version