Home ಟಾಪ್ ಸುದ್ದಿಗಳು ಇಂದೋರ್ ಟೆಸ್ಟ್: ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಜಯ

ಇಂದೋರ್ ಟೆಸ್ಟ್: ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಜಯ

ಇಂದೋರ್: ಇಂದೋರ್ ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ, ಭಾರತದ ಕ್ಲೀನ್ ಸ್ವೀಪ್ ಗುರಿಯನ್ನು ಭಗ್ನಗೊಳಿಸಿದೆ.


ಹೋಳ್ಕರ್ ಮೈದಾನದಲ್ಲಿ ಗೆಲುವಿಗಾಗಿ ಮೂರನೇ ದಿನ 76 ರನ್ ಗಳ ಗುರಿ ಪಡೆದಿದ್ದ ಸ್ಟೀವ್ ಸ್ಮಿತ್ ಪಡೆ, ಕೇವಲ ಒಂದು ವಿಕೆಟ್ ನಷ್ಟದಲ್ಲಿ 18.5 ಓವರ್ಗಳಲ್ಲಿ ಗುರಿ ತಲುಪಿತು.
ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪ್ರವಾಸಿ ಆಸ್ಟ್ರೇಲಿಯಾ ಪಡೆ ಮೂರನೇ ಟೆಸ್ಟ್ನಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಂಡಿದೆ.
ಸೋಲಿನ ಹೊರತಾಗಿಯೂ ಭಾರತ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.


ಶುಕ್ರವಾರ ಖಾತೆ ತೆರೆಯುವ ಮುನ್ನವೇ ಆಸೀಸ್ ಮೊದಲ ವಿಕೆಟ್ ಕಳೆದುಕೊಂಡಿತ್ತು.
ದಿನದ ಎರಡನೇ ಎಸೆತದಲ್ಲಿ ಉಸ್ಮಾನ್ ಖ್ವಾಜಾ ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್, ಪಂದ್ಯಕ್ಕೆ ತಿರುವು ತಂದುಕೊಡುವ ಸೂಚನೆ ನೀಡಿದ್ದರು. ಆದರೆ, ಆ ಬಳಿಕ ಒಂದಾದ ಟ್ರಾವಿಸ್ ಹೆಡ್ ಮತ್ತು ಮಾರ್ಕಸ್ ಲಾಬುಶಾನೆ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು.

Join Whatsapp
Exit mobile version