Home ಟಾಪ್ ಸುದ್ದಿಗಳು ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತು: ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತು: ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ! ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು? ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ? ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ ಬಿಜೆಪಿಯವರೇ ? ಎಂದು ಕರ್ನಾಟಕ ಕಾಂಗ್ರೆಸ್ ಜಾಡಿಸಿದೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಮಿಷನ್ ಲೂಟಿಗೆ ದಾಖಲೆ ಕೇಳುವ ಬೊಮ್ಮಾಯಿ ಅವರೇ, ದಾಖಲೆಗಳು ಕಂತೆ ಕಂತೆಯಾಗಿ ಸಿಕ್ಕಿವೆ ನೋಡಿ. ಈಗ ಕಮಿಷನ್ ಆರೋಪ ಒಪ್ಪುವಿರಾ? ಚುನಾವಣೆ ಖರ್ಚಿಗಾಗಿ ಬಿಜೆಪಿಯ ElectionCollection ಬಿರುಸಿನಿಂದ ಸಾಗಿದೆ, ಅಧಿಕಾರಾವಧಿ ಮುಗಿಯುತ್ತಿದೆ, ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಬಕಾಸುರನಂತೆ ದೋಚಿ ಬಾಚುತ್ತಿದೆ ಎಂದು ಟೀಕಿಸಿದೆ.


ಕಮಿಷನ್’ನ ಪರ್ಸೆಂಟೂ ನಲವತ್ತು, ಪಡೆಯುತ್ತಿದ್ದ ಲಂಚವೂ ನಲವತ್ತು, ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತು!! ಶಾಸಕರ ಪರವಾಗಿ ಶಾಸಕರ ಪುತ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬೀಳುವ ಮೂಲಕ ಬಿಜೆಪಿಯ ಕಮಿಷನ್ ದಂಧೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಂತಾಗಿದೆ. ಈಗ ಬೊಮ್ಮಾಯಿ ಅವರು ರಾಜೀನಾಮೆ ಕೊಡ್ತಾರಾ? ಎಂದು ಪ್ರಶ್ನಿಸಿದೆ.

Join Whatsapp
Exit mobile version