Home ಟಾಪ್ ಸುದ್ದಿಗಳು 700 ಅಡಿ ಆಳದ ಕಂದಕಕ್ಕೆ ಬಿದ್ದ ಭಾರತೀಯ ಸೇನಾ ವಾಹನ: 4 ಯೋಧರು ಮೃತ

700 ಅಡಿ ಆಳದ ಕಂದಕಕ್ಕೆ ಬಿದ್ದ ಭಾರತೀಯ ಸೇನಾ ವಾಹನ: 4 ಯೋಧರು ಮೃತ

ಉತ್ತರ ಸಿಕ್ಕಿಂ: ಭಾರತ-ಚೀನಾ ಗಡಿಯ ಸಮೀಪ ಉತ್ತರ ಸಿಕ್ಕಿಂನಲ್ಲಿ ಭಾರತೀಯ ಸೇನಾ ವಾಹನ ಸುಮಾರು 700ರಿಂದ 800 ಅಡಿ ಆಳದ ಕಂದಕಕ್ಕೆ ಬಿದ್ದು 4 ಯೋಧರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಚಾಲಕ ಪ್ರದೀಪ್ ಪಟೇಲ್, ಡಬ್ಲ್ಯೂ. ಪೀಟರ್, ಗುರ್ಸೇವ್ ಸಿಂಗ್ ಮತ್ತು ತಮಿಳುನಾಡಿನ ಸುಬೇದಾರ್ ಕೆ. ತಂಗಪಾಂಡಿ ಮೃತ ಯೋಧರು. ಮೃತರೆಲ್ಲರೂ ಪಶ್ಚಿಮ ಬಂಗಾಳದ ಬಿನಾಗುರಿಯಲ್ಲಿರುವ ಘಟಕದ ಸೇನಾ ಸಿಬ್ಬಂದಿ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ

ಸೇನಾ ಟ್ರಕ್ ಪಶ್ಚಿಮ ಬಂಗಾಳದ ಪೆಡಾಂಗ್‌ನಿಂದ ಸಿಲ್ಕ್ ರೂಟ್ ಮೂಲಕ ಸಿಕ್ಕಿಂನ ಜಿಲ್ಲೆಯ ಜುಲುಕ್‌ಗೆ ಹೋಗುತ್ತಿದ್ದಾಗ, ಸಿಕ್ಕಿಂನ ರೆನಾಕ್ ರೋಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್‌ಚಂದ್ ದಾರಾ ಬಳಿ ಈ ಘಟನೆ ನಡೆದಿದೆ.

ಕಳೆದ ವರ್ಷವೂ ಲಡಾಖ್‌ನ ಲೇಹ್ ಸಮೀಪದ ಕ್ಯಾರಿ ಗ್ರಾಮದಲ್ಲಿ ಆಗಸ್ಟ್‌ನಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿ ಒಂಬತ್ತು ಯೋಧರು ಪ್ರಾಣ ಕಳೆದುಕೊಂಡಿದ್ದರು.

Join Whatsapp
Exit mobile version