Home ಟಾಪ್ ಸುದ್ದಿಗಳು ನಾನು ಡೀಪಿ ಚೇಂಜ್ ಮಾಡಿದ್ದೇನೆ, ನೀವೂ ಮಾಡಿ: ಪ್ರಧಾನಿ ಮೋದಿ

ನಾನು ಡೀಪಿ ಚೇಂಜ್ ಮಾಡಿದ್ದೇನೆ, ನೀವೂ ಮಾಡಿ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಪುಟಗಳ ಡಿಸ್ಪ್ಲೇ ಫೋಟೋ (ಡೀಪಿ) ರಾಷ್ಟ್ರಧ್ವಜವಾಗಿ ಬದಲಾಯಿಸಿದ್ದಾರೆ ಮತ್ತು ಎಲ್ಲಾ ದೇಶವಾಸಿಗಳಿಗೆ ಡೀಪಿ ಬದಲಾಯಿಸುವಂತೆ ಮನವಿ ಮಾಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ನಮ್ಮ ದೇಶವು ನಮ್ಮ ತ್ರಿವರ್ಣ ಧ್ವಜವನ್ನು ಆಚರಿಸುವ ಸಾಮೂಹಿಕ ಆಂದೋಲನಕ್ಕೆ ಸಜ್ಜಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಡಿಪಿಯನ್ನು ಬದಲಾಯಿಸಿದ್ದೇನೆ ಮತ್ತು ಅದೇ ರೀತಿ ನೀವೂ ಬದಲಾಯಿಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ

ಆ.2ರಿಂದ 15ರವರೆಗೆ ಡೀಪಿಗಳಲ್ಲಿ ತಿರಂಗಾ ಚಿತ್ರವನ್ನು ಹಾಕುವಂತೆ ಇತ್ತೀಚೆಗೆ ಮೋದಿ ಸಲಹೆ ನೀಡಿದ್ದರು. ಅದರಂತೆ ಮಂಗಳವಾರ ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಕರ್ನಾಟಕ ಸಿಎಂ ಬೊಮ್ಮಾಯಿ, ಉ.ಪ್ರ. ಸಿಎಂ ಯೋಗಿ ಸೇರಿದಂತೆ ಬಹುತೇಕ ಮಂದಿ ಡೀಪಿ ಬದಲಿಸಿಕೊಂಡಿದ್ದಾರೆ.

Join Whatsapp
Exit mobile version