Home ಟಾಪ್ ಸುದ್ದಿಗಳು ಪೇಟಿಎಂ ವಿರುದ್ಧ ಫೋನ್ ಫೋನ್ ಪೇ ದೂರು: QR ಕೋಡ್ ಸುಟ್ಟುಹಾಕಿದ ಆರೋಪ

ಪೇಟಿಎಂ ವಿರುದ್ಧ ಫೋನ್ ಫೋನ್ ಪೇ ದೂರು: QR ಕೋಡ್ ಸುಟ್ಟುಹಾಕಿದ ಆರೋಪ

ಅಹ್ಮದಾಬಾದ್ : ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ ತನ್ನ ಕ್ಯೂಆರ್ ಕೋಡ್ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಪ್ರತಿಸ್ಪರ್ಧಿ ಪೇಟಿಎಂ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ.

ಮೂವರು ಪೇಟಿಎಂ ಉದ್ಯೋಗಿಗಳು ತಮ್ಮ ಕ್ಯೂಆರ್ ಕೋಡ್ ಗಳನ್ನು ಸುಟ್ಟುಹಾಕಿದ್ದಾರೆ ಎಂದು ಫೋನ್ ಪೇ ಆರೋಪಿಸಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಸೂರಜ್ಪುರ್ ಲಖ್ನವಾಲಿ ಪೊಲೀಸ್ ಠಾಣೆಯಲ್ಲಿ ಜುಲೈ 29 ರಂದು ದೂರು ಕೂಡಾ ದಾಖಲಿಸಲಾಗಿದೆ.

ಫೋನ್ ಪೇ ತನ್ನ ಕ್ಯೂಆರ್ ಕೋಡ್ ಗಳ ರಾಶಿಯನ್ನು ಸುಡುತ್ತಿರುವ ವೀಡಿಯೊದ ಆಧಾರದ ಮೇಲೆ, ವಿಡಿಯೋದಲ್ಲಿರುವ ಮೂವರನ್ನು ಪೇಟಿಎಂನ ಉದ್ಯೋಗಿಗಳು ಎಂದು ಗುರುತಿಸಲಾಗಿದೆ ಎಂದು ಫೋನ್ಪೇ ವಕ್ತಾರರು ತಿಳಿಸಿದ್ದಾರೆ.

Join Whatsapp
Exit mobile version